ನವದೆಹಲಿ, ಜೂ 26(DaijiworldNews/PY) : ಚೀನಾ ಸೇನೆಯು ಲಡಾಖ್ನಲ್ಲಿ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಆದರೆ, ನಮ್ಮ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಹಿಂದಕ್ಕೆ ಪಡೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಗಳಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಲಡಾಖ್ನಲ್ಲಿ ಚೀನಾದ ಸೈನ್ಯವು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಮೋದಿ ಸರ್ಕಾರವು ನಮ್ಮ ಭೂಮಿಯನ್ನು ಹೇಗೆ ಹಿಂದಕ್ಕೆ ಪಡೆದುಕೊಳ್ಳುತ್ತದೆ? ಇಂದು ಜನರು ನಮ್ಮ ಸೈನ್ಯದ ಸೈನಿಕರೊಂದಿಗೆ ನಿಂತಿದ್ದಾರೆ. ಸರ್ಕಾರವು ಸೈನ್ಯಕ್ಕೆ ಸಂಪೂರ್ಣವಾದ ಬೆಂಬಲ ನೀಡಬೇಕು. ಇದು ನಿಜವಾದ ದೇಶಭಕ್ತಿ. ಎಂದಿದ್ದಾರೆ.
ಹುತಾತ್ಮರಿಗೆ ಸಲಾಂ ದಿವಸ ಕುರಿತ ವಿಡಿಯೋ ಸಂದೇಶದಲ್ಲಿ ತಿಳಿಸಿದ ಅವರು ಕೇಂದ್ರ ಸರ್ಕಾರವು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣವಾದ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಇಂದು ಭಾರತ- ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಂಟಾದರೆ, ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳಿಂದ ಹಿಂದಕ್ಕೆ ಸರಿಯುವುದಿಲ್ಲ. ಆದರೆ, ಭಾರತದ ಭೂಪ್ರದೇಶದ ಮೇಲೆ ಯಾವುದೇ ಆಕ್ರಮಣವಾಗಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಅದಲ್ಲದೇ, ರಕ್ಷಣಾ ಸಚಿವರು ಹಾಗೂ ವಿದೇಶಾಂಗ ಸಚಿವರು ಚೀನಾದ ಆಕ್ರಮಣವನ್ನು ಪದೇ ಪದೇ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ಸೈನ್ಯದ ಮುಖ್ಯಸ್ಥರು, ರಕ್ಷಣಾ ತಜ್ಞರು ಹಾಗೂ ಮಾಧ್ಯಮಗಳು ನಮ್ಮ ಭೂಪ್ರದೇಶದಲ್ಲಿ ಚೀನಾ ಆಕ್ರಮಣ ಮಾಡಿರುವುದನ್ನು ದೃಢಪಡಿಸಿವೆ. ಪ್ರಧಾನಿ ಮೋದಿ ಅವರು ಹೇಳುತ್ತಿರುವುದು ಸತ್ಯವಾಗಿದ್ದರೆ, 20 ಮದಿ ಭಾರತೀಯ ಸೇನಾ ಸಿಬ್ಬಂದಿಗಳು ಹೇಗೆ ಹುತಾತ್ಮರಾದರು? ಎಂದು ಕೇಳಿದರು.
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನ್ಯ ನಡೆಸಿದ ಆಕ್ರಮಣವನ್ನು ತಡೆಯಲು ಮುಂದಾದ ಸಂದರ್ಭ ಭಾರತೀಯ ಸೈನ್ಯ 20 ಸೈನಿಕರು ಹುತಾತ್ಮರಾಗಿದ್ದಾರೆ. ದೇಶವು ಅವರ ಸೇವೆಗ ಯಾವಾತ್ತಿಗೂ ಋಣಿಯಾಗಿರುತ್ತದೆ. ನಮಗೆ ನಮ್ಮ ಸೈನಿಕರು ಹಾಗೂ ಸೈನ್ಯದ ಬಗ್ಗೆ ಹೆಮ್ಮೆ ಇದೆ. ನಾವು ಇಂದು ಸುರಕ್ಷಿತವಾಗಿದ್ದೇವೆ ಎಂದರೆ ಅದು ನಮ್ಮ ಯೋಧರಿಂದ ಎಂದು ಹೇಳಿದರು.