ರಾಜಸ್ಥಾನ, ಜೂ. 27 (DaijiworldNews/MB) : ಲಡಾಖ್ ಗಡಿಯಲ್ಲಿ ಚೀನಾ ಭಾರತ ಸೇನೆಯ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ನಿಂದ ಸಂತಾಪ ಸಭೆ ನಡೆದಿದ್ದು ರಾಜಸ್ತಾನದಲ್ಲಿ ನಡೆದ ಈ ಸಭೆಯಲ್ಲಿ ಕಾರ್ಯಕರ್ತರಿಬ್ಬರು ಹೊಡೆದಾಟ ನಡೆಸಿದ್ದಾರೆ. ಇದೀಗ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಬಡಿದಾಟ ವಿಡಿಯೋ ವೈರಲ್ ಆಗಿದೆ.
ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರ ರಾತ್ರಿ ಚೀನಾ ಭಾರತದ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆಯಂತೆ ಈ ಹುತಾತ್ಮರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಶುಕ್ರವಾರದಂದು ದೇಶದಾದ್ಯಂತ ಕಾಂಗ್ರೆಸ್ನಿಂದ ನಡೆದಿದೆ. ರಾಜಸ್ತಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ನಡುವೆ ಬಡಿದಾಟ ನಡೆದಿದ್ದು ಪಕ್ಷದ ಇತರ ಕಾರ್ಯಕರ್ತರು ಬಂದು ಇವರನ್ನು ಬಿಡಿಸಿದ್ದಾರೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಕೂಡಾ ವರದಿ ತಿಳಿಸಿದೆ.