ನವದೆಹಲಿ, ಜೂ 27 (Daijiworld News/MSP): ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಚೀನಾ ತನ್ನ ಮೊಂಡು ಹಠವನ್ನು ಬಿಡದೆ ಈಗಾಗಲೇ ಅಲ್ಲಿನಿಯೋಜಿಸಿರುವ ಸೇನೆಯನ್ನು ಹಿಂಪಡೆಯದೆ ಇದ್ದರೆ ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವುದು ಖಂಡಿತಾ ಎಂದು ಭಾರತ ಚೀನಾಗೆ ಮತ್ತೊಂಮೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈಗಿರುವಂತೆ ಪರಿಸ್ಥಿತಿಯನ್ನು ಮುಂದುವರಿಸಿ ಸೇನೆ ನಿಯೋಜಿಸಿ ಘರ್ಷಣೆ ಮಾಡಲು ಯತ್ನಿಸಿದರೆ ಶಾಂತಿಗೆ ಧಕ್ಕೆಯಾಗುವುದು ಖಂಡಿತಾ ಹೀಗಾಗಿ ಚೀನಾ ಪೂರ್ವ ಲಡಾಕ್ ನಲ್ಲಿ ಸೇನಾ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಗಡಿಯಲ್ಲಿ ಇನ್ನು ಸೇನೆ ನಿಯೋಜನೆ ಸರಿಯಾದ ಕ್ರಮವಲ್ಲ. ಭಾರತದ ನಂಬಿಕೆಗೆ ಈಗಾಗಲೇ ಚೀನಾ ಧಕ್ಕೆಯನ್ನುಂಟುಮಾಡಿದೆ. ಭಾರತವು ಈಗಾಗಲೇ ಶಾಂತಿ ಮತ್ತು ಭಾತೃತ್ವ ಕಡೆಗೆ ಸ್ಪಷ್ಟ ನಿಲುವು ತಾಳಿದೆ. ಇನ್ನು ದ್ವಿಪಕ್ಷೀಯ ಸಂಬಂಧವನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ಚೀನಾ ನಿರ್ಧರಿಸಬೇಕು ಎಂದು ಮಿಸ್ರಿ ಹೇಳಿದ್ದಾರೆ.