ಕಲಬುರ್ಗಿ, ಜೂ. 27 (DaijiworldNews/MB) : ಎಸ್ಎಸ್ಎಲ್ಸಿ ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರದ ಯತ್ನ ಜೂನ್ 24 ರ ರಾತ್ರಿ ನಡೆದಿದ್ದು ವಿದ್ಯಾರ್ಥಿನಿ ಮರುದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಬಳಿಕ ಪರೀಕ್ಷೆಗೆ ಹಾಜರಾಗುವ ಮೂಲಕ ದಿಟ್ಟತನ ತೋರಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆ ಕಮಲಾಪುರ ತಾಲ್ಲೂಕಿನ ತಾಂಡಾವೊಂದರಲ್ಲಿ ಜೂನ್ 24 ರ ತಡರಾತ್ರಿಯಲ್ಲಿ ವಿದ್ಯಾರ್ಥಿನಿಯು ಮನೆಯ ಅಂಗಳದಲ್ಲಿದ್ದ ಬೀದಿದೀಪದ ಬೆಳಕಿನಲ್ಲಿ ಕುಳಿತು ಓದುತ್ತಿದ್ದು ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಬಳಿ ಮಾತನಾಡುವ ನೆಪದಲ್ಲಿ ಬಂದ ವಿವಾಹಿತ ವ್ಯಕ್ತಿಯೋರ್ವ ವಿದ್ಯಾರ್ಥಿನಿ ಬಾಯಿಗೆ ಬಟ್ಟೆ ತುರುಕಿ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಬಾಲಕಿಯು ಈ ಸಂದರ್ಭದಲ್ಲಿ ಜೋರಾಗಿ ಕೂಗಿಕೊಂಡಿದ್ದು ಸ್ಥಳೀಯರು ಆಗಮಿಸಿದ್ದಾರೆ. ಇದನ್ನು ನೋಡಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಮರುದಿನ ಬೆಳಿಗ್ಗೆಯೇ ಪೊಲೀಸ್ ಠಾಣೆಗೆ ತೆರಳಿ ಮುಂಬೈನಿಂದ ಬಂದಿರುವ ಅದೇ ಪ್ರದೇಶದ ವಿವಾಹಿತ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿರುವ ಬಗ್ಗೆ ದೂರು ನೀಡಿ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜಾರಾಗಿದ್ದಾರೆ.
ಈ ಬಗ್ಗೆ ಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.