ನವದೆಹಲಿ, ಜೂ. 27 (DaijiworldNews/MB) : ''ಕೊರೊನಾದ ಎದುರು ಪ್ರಧಾನಿ ನರೇಂದ್ರ ಮೋದಿ ಶರಣಾಗಿದ್ದಾರೆ ಹಾಗೆಯೇ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಿರಾಕರಿಸುತ್ತಿದ್ದಾರೆ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೊರೊನಾ ದೇಶದ ಹೊಸ ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಕೊರೊನಾವನ್ನು ಸೋಲಿಸಲು ಭಾರತ ಸರ್ಕಾರವು ಯೋಜನೆಯನ್ನು ಹೊಂದಿಲ್ಲ. ಪ್ರಧಾನಿ ಮೌನವಾಗಿದ್ದಾರೆ. ಕೊರೊನಾಗೆ ಶರಣಾಗಿದ್ದಾರೆ. ಹಾಗೆಯೇ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಿರಾಕರಿಸುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ಈ ಟ್ವೀಟ್ನೊಂದಿಗೆ ಐಸಿಎಂಆರ್ನ ಮಂಡಳಿಯಾಲಿ, ಸಚಿವರಾಗಲಿ ಈವರೆಗೆ ಸಭೆ ನಡೆಸಲಿಲ್ಲ. ಆರೋಗ್ಯ ಸಚಿವರೂ ಪಿಡುಗಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂಬ ವರದಿಯೊಂದನ್ನು ಟ್ಯಾಗ್ ಮಾಡಿದ್ದಾರೆ.