ನವದೆಹಲಿ,ಜೂ 27 (Daijiworld News/MSP): "ಈ ವರ್ಷದ ಆರಂಭದಲ್ಲಿ ಕೊರೊನಾ ಪರಿಣಾಮ ಭಾರತದಲ್ಲಿ ಗಂಭೀರ ಪರಿಸ್ಥಿತಿಗೆ ತಲುಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ಲಾಕ್ಡೌನ್, ಸರ್ಕಾರ ಕೈಗೊಂಡ ಅನೇಕ ಕ್ರಮಗಳು, ಜನರ ಸಹಕಾರದಿಂದಾಗಿ ದೇಶವಿಂದು ಉತ್ತಮ ಸ್ಥಿತಿಯಲ್ಲಿದೆ ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರೆವೆರೆಂಡ್ ಡಾ. ಜೋಸೆಫ್ ಮರ್ಥೊಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಇತರ ಅನೇಕ ದೇಶಗಳಿಗಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದರು
"ಭಾರತವು ಇತರ ಕೊರೊನಾ ಪೀಡಿತ ಹಲವು ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಸಾಂಕ್ರಮಿಕ ರೋಗದ ವಿರುದ್ದ ಜನರ ಹೋರಾಟವು ದೇಶದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಅದರೂ ನಾವು ಮತ್ತಷ್ಟು ಜಾಗರೂಕರಾಗಿರುವುದು ಅತಿ ಅಗತ್ಯ. ಭಾರತದ ಸಂವಿಧಾನ ನಮ್ಮ ಮಾರ್ಗದರ್ಶಕ ಬೆಳಕಾಗಿದ್ದು, ನಂಬಿಕೆ, ಲಿಂಗ, ಜಾತಿ, ಮತ ಅಥವಾ ಭಾಷೆಯ ನಡುವೆ ಸರ್ಕಾರ ಎಂದು ತಾರತಮ್ಯ ಮಾಡುವುದಿಲ್ಲ" ಎಂದು ಇದೇ ವೇಳೆ ಹೇಳಿದರು.