ರಾಂಚಿ, ಜೂ. 27 (DaijiworldNews/MB) : ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಜಾರ್ಖಂಡ್ನಲ್ಲಿ ಲಾಕ್ಡೌನ್ ಅನ್ನು ಜುಲೈ 31ರವರೆಗೂ ವಿಸ್ತರಿಸಲಾಗಿದೆ.
ಜಾರ್ಖಂಡ್ನಲ್ಲಿ ಭಾನುವಾರ ಈ ಮೊದಲು ಹೇರಲಾಗಿರುವ ಲಾಕ್ಡೌನ್ ಅವಧಿ ಮುಕ್ತಾಯವಾಗಲಿದ್ದು ಸರ್ಕಾರ ಲಾಕ್ಡೌನ್ ಅವಧಿಯನ್ನು ಪುನಃ ವಿಸ್ತರಿಸಿದ್ದು ಪ್ರಸ್ತುತ ನೀಡಲಾಗಿರುವ ವಿನಾಯತಿಗಳು ಹಾಗೇ ಮುಂದುವರೆಯಲಿದೆ.
ಈಗಾಗಲೇ ಪಶ್ಷಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳು ಜುಲೈ 31ರವರೆಗೂ ಲಾಕ್ಡೌನ್ನ್ನು ವಿಸ್ತರಿಸಿದೆ. ಇನ್ನು ಕೇಂದ್ರ ಗೃಹ ಇಲಾಖೆ ಜಾರಿ ಮಾಡಿರುವ ಅನ್ ಲಾಕ್ 1 ಜೂನ್ 30 ರವರೆಗೆ ಜಾರಿಯಲ್ಲಿರಲಿವೆ.
ಜಾರ್ಖಂಡ್ ರಾಜ್ಯದಲ್ಲಿ 2,261 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 12 ಜನರು ಸಾವನ್ನಪ್ಪಿದ್ದಾರೆ.