ನವದೆಹಲಿ, ಜೂ 27 (Daijiworld News/MSP): ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 58 ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನಾನ್ ಶನಿವಾರ ತಿಳಿಸಿದ್ದಾರೆ.
ದೇಶದಲ್ಲಿ ಒಟ್ಟು ಐದು ಲಕ್ಷ ಕೊರೋನಾ ವೈರಸ್ ಪೀಡಿತರಲ್ಲಿಸುಮಾರು 3 ಲಕ್ಷ ಜನರು ಗುಣಮುಖರಾಗಿದ್ದು ಚೇತರಿಕೆ ಪ್ರಮಾಣ ಶೇ,58ಕ್ಕಿಂತಲೂ ಹೆಚ್ಚಿದೆ. ಬಾಕಿ ಉಳಿದ ರೋಗಿಗಳು ಸಹ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಸೋಂಕಿತರ ಪ್ರಮಾಣದಲ್ಲಿ ಶೇಕಡಾ 85 ಪ್ರತಿಶತದಷ್ಟು ರೋಗಿಗಳು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿದೆ. ಅಲ್ಲದೆ ದುರದೃಷ್ಟಕರ ಸಂಗತಿ ಎಂದರೆ ರೋಗದಿಂದ ಉಂಟಾಗುವ ಸಾವುಗಳಲ್ಲಿ ಶೇಕಡಾ 87 ಕ್ಕಿಂತಲೂ ಹೆಚ್ಚು ಈ ಎಂಟು ರಾಜ್ಯಗಳಿಂದಲೇ ವರದಿಯಾಗಿದೆ ಎಂದು ಅವರು ಹೇಳಿದರು
ಇನ್ನು ದೇಶದಲ್ಲಿ ಸಾವಿನ ಪ್ರಮಾಣ ಶೇ.3ಕ್ಕೂ ಕಡಿಮೆ ಇದೆ. ವೈರಸ್ ಸೋಂಕಿತರ ದ್ವಿಗುಣಗೊಳ್ಳುವಿಕೆ ಪ್ರಮಾಣ 19 ದಿನಗಳ ಸನಿಹಕ್ಕೆ ಇಳಿದಿದೆ, ಲಾಕ್ಡೌನ್ಗೆ ಮೊದಲಿಗೆ ಮೂರು ದಿನಗಳಲ್ಲಿ ಇತ್ತು. ಪರೀಕ್ಷಾ ಸೌಲಭ್ಯಗಳು ದೇಶದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ರೋಗಿಗಳು ಗುಣಮುಖರಾಗುತ್ತಿರುವಂತೆ ಕಳೆದ 24 ಗಂಟೆಗಳಲ್ಲಿ 18 ಸಾವಿರದ 552 ಹೊಸ ಪ್ರಕರಣಗಳು ಕಾಣಿಸಿಕೊಂಡಿದೆ.