ಮಲಪ್ಪುರಂ, ಜೂ. 27 (DaijiworldNews/MB) : ನನ್ನನ್ನು ಹೆಣ್ಣಾಗಿ ಬದುಕಲು ಬಿಡಿ ಎಂದು 17 ವರ್ಷದ ಬಾಲಕನು ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿರುವ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿ ತಿಳಿಸಿದೆ.
ಈ ಬಾಲಕನು ಹೆಣ್ಣಾಗಿ ಬದುಕಬೇಕೆಂಬ ಆಸೆಯನ್ನು ತನ್ನ ಪೋಷಕರಲ್ಲಿ ಹೇಳಿದ್ದು ಮನೆಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದು ನಾನು ಬಯಸುವ ರೀತಿಯಲ್ಲಿ ಬದುಕಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಮಹಿಳೆಯಾಗಿ ಬದುಕಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿರುವ ಈ ಬಾಲಕನನ್ನು ಹತ್ತಿರದ ಪೆರಿಂಟಲ್ಮನ್ನಾದಲ್ಲಿರುವ ಮಂಗಳಮುಖಿಯರ ಬಳಿ ಒಂದು ತಿಂಗಳ ಕಾಲ ಆರೈಕೆ ಮತ್ತು ರಕ್ಷಣೆಗಾಗಿ ನೀಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಕ್ಕಳ ಕಲ್ಯಾಣ ಸಮಿತಿ, ಬಾಲಕನ ತಂದೆಯೂ ಕೂಡಾ ಸ್ತ್ರೀಯಂತೆ ವರ್ತನೆ ಮಾಡುತ್ತಾರೆ. ಆದರೆ ಅವರು ಸಾಮಾನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಮಗ ಹೆಣ್ಣಾದರೆ ನಮ್ಮ ಜೊತೆ ಇರಲಾರ ಎಂದು ಪೋಷಕರು ಭಯ ಪಟ್ಟಿದ್ದಾರೆ. ಅವರಿಗೆ ಮಂಗಳಮುಖಿಯರು ಕೂಡಾ ಸ್ವಾವಲಂಬಿತರಾಗಿ ಜೀವನ ನಡೆಸಲು ಸಾಧ್ಯ ಎಂದು ತಿಳಿಸಲಾಗಿದೆ ಎಂದು ಹೇಳಿದೆ.