ಸಾತಾರ, ಜೂ. 27 (DaijiworldNews/MB) : 1962 ರಲ್ಲಿ ನಡೆದ ಭಾರತ–ಚೀನಾ ಯುದ್ಧದ ಬಳಿಕ ಭಾರತದ 45 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾದ ವಶದಲ್ಲಿದೆ ಎಂದು ಯಾರೂ ಕೂಡಾ ಮರೆಯಬಾರದು ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಶನಿವಾರ ತಿಳಿಸಿದ್ದಾರೆ.
ಚೀನಾ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಭೂ ಪ್ರದೇಶವನ್ನು ಬಿಟ್ಟು ಕೊಟ್ಟಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ರಕ್ಷಣಾ ಸಚಿವರೂ ಆಗಿರುವ ಅವರು, 1962 ರಲ್ಲಿ ನಡೆದ ಭಾರತ–ಚೀನಾ ಯುದ್ಧದ ಬಳಿಕ ಭಾರತದ 45 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾದ ವಶದಲ್ಲಿದ್ದು ಅದನ್ನು ನಾವು ಮರೆಯಬಾರದು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು ಇದರಕ್ಕೂ ರಾಜಕೀಯ ಮಾಡಬಾರದು. ಚೀನಾದ ಪ್ರಚೋದನೆಯಿಂದಾಗಿ ಗಾಲ್ವನ್ನಲ್ಲಿ ಸಂಘರ್ಷ ನಡೆದಿದ್ದು ಈ ವಿಚಾರದಲ್ಲಿ ರಕ್ಷಣಾ ಸಚಿವರ ವೈಫಲ್ಯವಿದೆ ಎಂದು ಟೀಕೆ ಮಾಡುವುದು ಸರಿಯಲ್ಲಿ ಎಂದು ಹೇಳಿದ್ದಾರೆ.
ಸಂಘರ್ಷವಾಗಿದೆ ಎಂದಾದ್ದಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಅರ್ಥ. ಈ ಸಂದರ್ಭದಲ್ಲೂ ಈ ರೀತಿ ಆರೋಪ ಮಾಡುತ್ತಾ ಕೂರುವುದು ಸರಿಯಲ್ಲ. 1962 ರಲ್ಲಿ ಚೀನಾ ತನ್ನ ವಶಕ್ಕೆ ಪಡೆದ 45 ಸಾವಿರ ಚದರ ಕಿ.ಮೀ. ಭೂ ಭಾಗ ಇನ್ನೂ ಕೂಡಾ ಚೀನಾದ ವಶದಲ್ಲಿಯೇ ಇದೆ. ಇಷ್ಟೊಂದು ಭೂಮಿಯನ್ನು ಚೀನಾ ವಶಕ್ಕೆ ಪಡೆದಿರುವುದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳದೆ ಇರಲಾಗದು. ಆ ಬಳಿಕವೂ ಚೀನಾ ಮತ್ತಷ್ಟು ಭೂಮಿ ವಶಕ್ಕೆ ಪಡೆದಿರುವ ಬಗ್ಗೆ ನನೆಗ ಗೊತ್ತಿಲ್ಲ. ಆದರೆ ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡುವುದು ಉಚಿತವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.