ಮುಂಬೈ, ಜೂ. 28 (DaijiworldNews/MB) : ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಬೇಧ ಮರೆತು ಚೀನಾವನ್ನು ಎದುರಿಸುವ ವಿಷಯದ ಕುರಿತಾಗಿ ಮಾತನಾಡುವ ಸಮಯ ಇದಾಗಿದೆ ಎಂದು ಶಿವ ಸೇನೆ ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ಚೀನಾದಿಂದ ಹಣ ಪಡೆಯುತ್ತಿದೆ ಎಂದು ಬಿಜೆಪಿ ಆರೋಪ ಮಾಡಿರುವ ಕುರಿತಾಗಿ ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಸಂಪಾದಕೀಯ ಬರಹದಲ್ಲಿ, ಚೀನಾದ ಸೈನಿಕರು ಅರುಣಾಚಲ ಮತ್ತು ಸಿಕ್ಕಿಂ ಮೂಲಕ ಬರುತ್ತಿದ್ದು ಚೀನಾ ಗಲ್ವಾನ್ ಕಣಿವೆಯಲ್ಲಿ ಹೊಸದಾಗಿ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪೈಪೋಟಿಯನ್ನು ಮರೆತು ಒಂದುಗೂಡಬೇಕಾಗಿದ್ದು ಚೀನಾದ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದೆ.
ಚೀನಾವು ಇಂತಹ ಕುತಂತ್ರಗಳನ್ನು ನಿರಂತರವಾಗಿ ಮಾಡುತ್ತಿದ್ದು ಭಾರತವೇ ಯುದ್ಧ ಆರಂಭಿಸುವಂತೆ ಪ್ರಚೋದನೆ ಮಾಡುವುದೇ ಅವರ ಉದ್ದೇಶ. ಅದಕ್ಕಾಗಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾನ ಮಾಡಿದೆ. ಒಂದನ್ನು ಹೇಳಿ ಇನ್ನೊಂದನ್ನು ಮಾಡುವುದೇ ಚೀನಾದ ನೀತಿ ಎಂದು ಚೀನಾ ವಿರುದ್ಧ ಕಿಡಿಕಾರಿದ್ದು ಚೀನಾ ನಮ್ಮ ಗಡಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಚೀನಾ ಯುದ್ಧವನ್ನು ಬಯಸಲ್ಲ ಆದರೆ ಭಾರತಕ್ಕೆ ಯುದ್ಧದ ಬೆದರಿಕೆ ನೀಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.