ನವದೆಹಲಿ, ಜೂ. 28 (DaijiworldNews/MB) : ಸತತ 21 ದಿನಗಳಿಂದ ಏರುತಗತಿಯಲ್ಲಿ ಸಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಇಂದು ಬ್ರೇಕ್ ಬಿದ್ದಿದ್ದು ಸತತ 21 ದಿನಗಳ ಬಳಿಕ ಮೊದಲ ಬಾರಿಗೆ ನವದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿಲ್ಲ.
ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 80.38 ರೂ. ಇದ್ದರೆ, ಡೀಸೆಲ್ ದರ ಲೀಟರ್ಗೆ 80.40 ರೂ. ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 82.99 ಆಗಿದ್ದರೆ, ಡೀಸೆಲ್ ದರ 76.45 ಆಗಿದೆ.
ಜೂನ್ 7ರಿಂದ ಇಂಧನ ದರ ಪರಿಷ್ಕರಣೆ ಆರಂಭಿಸಲಾಗಿದ್ದು ಸತತ 21 ದಿನಗಳ ಕಾಲ ಬೆಲೆ ಏರಿಕೆ ಮಾಡಲಾಗಿದೆ. ಈಗಾಗಲೇ ಲಾಕ್ಡೌನ್ ಕಾರಣದಿಂದ ಸಂಕಷ್ಟದಲ್ಲಿದ್ದ ಜನರಿಗೆ ತೈಲ ಬೆಲೆ ಏರಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.