ಪಾಲ್ಘರ್, ಜೂ. 28 (DaijiworldNews/MB) : ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೊಪರಾ ಎಂಬಲ್ಲಿ ಶನಿವಾರ ನಡೆದಿದೆ.
ಮೃತರು ಕೈಲಾಸ್ ವಿಜು ಪಾರ್ಮರ್ (35) ಹಾಗೂ ಆತನ 12 ವರ್ಷದ ಮಗ, 8 ಮತ್ತು 5 ವರ್ಷದ ಹೆಣ್ಣು ಮಕ್ಕಳು ಎಂದು ವರದಿ ತಿಳಿಸಿದೆ.
ವಿಜು ಪಾರ್ಮರ್ ಯಾಕಾಗಿ ತನ್ನ ಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ತನಿಖೆ ಆರಂಭಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.