ನವದೆಹಲಿ, ಜೂ 28(DaijiworldNews/PY) : ಮುಂದಿನ ಆದೇಶ ಬರುವವರೆಗೂ ರಾಜ್ಯದಲ್ಲಿ ಭಾನುವಾರ ಲಾಕ್ಡೌನ್ ಇಲ್ಲ ಎಂದು ಕೇರಳ ಸರ್ಕಾರ ಪ್ರಕಟಿಸಿದ್ದು, ರಾತ್ರಿ 9ರಿಂದ ಮುಂಜಾನೆ 5ರ ತನಕ ಕರ್ಫ್ಯೂ ಮುಂದುವರಿಯುತ್ತದೆ ಎಂದು ತಿಳಿಸಿದೆ.
ಇದರೊಂದಿಗೆ ಇತರ ದಿನಗಳಂತೆ ನಿಬಂಧನೆಗಳೊಂದಿಗೆ ಸಂಚಾರ, ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿದೆ ಎಂದಿದೆ.
ಮೇ 10ರಿಂದ ಸೀಮಿತ ಅನುಮತಿ ಚಟುವಟಿಕೆಗಳೊಂದಿಗೆ ರಾಜ್ಯವು ಭಾನುವಾರದಂದು ಲಾಕ್ಡೌನ್ ವಿಧಿಸಿತ್ತು. ಎರಡು ವಾರಗಳ ಬಳಿಕ ಕೇರಳ ನಿಯಮಗಳನ್ನು ಸಡಿಲಗೊಳಿಸಿದ್ದು, ಜೂನ್ 21ರವೆಗೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ತಿಳಿಸಿತ್ತು.
ಮುಂದಿನ ಆದೇಶದವರೆಗೆ ಭಾನುವಾರದಂದು ಲಾಕ್ಡೌನ್ ಮಾಡುವುದಿಲ್ಲ ಎಂದು ಆದೇಶಿಸಲು ಸರ್ಕಾರ ಸಂತೋಷವಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಜನವರಿಯಲ್ಲಿ ಕೇರಳದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ಅಲ್ಲದೇ, ಶೀಘ್ರದಲ್ಲೇ ಹಾಟ್ಸ್ಪಾಟ್ ಆಗಿ ಕೂಡಾ ಮಾರ್ಪಾಟ್ಟಿತ್ತು. ಅಲ್ಲದೇ, ರಾಜ್ಯವು ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಕೇರಳದಲ್ಲಿ ಕೊರೊನಾಗೆ ಒಟ್ಟು 22 ಮಂದಿ ಸಾವನ್ನಪ್ಪಿದ್ದು, 4,071 ಪ್ರಕರಣಗಳು ದಾಖಲಾಗಿವೆ.