ಜೈಪುರ, ಜೂ 28(DaijiworldNews/PY) : ಕುಟುಂಬವೊಂದು ವಿವಾಹಕ್ಕೆ 50ಕ್ಕೂ ಅಧಿಕ ಅತಿಥಿಗಳನ್ನು ಆಹ್ವಾನಿಸಿ 6.26 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ನಡೆದಿದೆ.
ತಮ್ಮ ಮಗನ ವಿವಾಹಕ್ಕೆ ಎಂದು ಭಡಾಡಾ ಮೊಹಲ್ಲಾ ನಿವಾಸಿ ಫಿಸುಲಾಲ್ ರತಿ ಅವರು ಜೂನ್ 13ರಂದು ಸಮಾರಂಭವೊಂದನ್ನು ಆಯೋಜಿಸಿದ್ದರು. ಅಲ್ಲದೇ, ಕೊರೊನಾ ನಿರ್ವಹಣೆಗೆ ಮಾಡಿದ್ದ ಆದೇಶವನ್ನು ಉಲ್ಲಂಘನೆ ಮಾಡಿದ್ದು, ವಿವಾಹ ಸಮಾರಂಭಕ್ಕೆ 50ಕ್ಕೂ ಅಧಿಕ ಜನರನ್ನು ಆಹ್ವಾನ ಮಾಡಿದ್ದರು.
ಸಮಾರಂಭ ಮುಗಿದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 15 ಅತಿಥಿಗಳಿಗೆ ಕೊರೊನಾ ಇರುವದು ದೃಢಪಟ್ಟಿದ್ದು, ಈ ಪೈಕಿ ಓರ್ವ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾ ನಿರ್ವಹಣೆಯ ಆದೇಶವನ್ನು ಉಲ್ಲಂಘಿಸಿದ ಕಾರಣ ರಾಜ್ಯ ಸರ್ಕಾರವು 6,26,600 ರೂಪಾಯಿ ದಂಡ ದಂಡ ವಿಧಿಸಿದ್ದು, ಈ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಕುಟುಂಬಕ್ಕೆ ಹೇಳಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ತಿಳಿಸಿದ್ದಾರೆ.
ಈ ಬಗ್ಗೆ ರತಿ ಅವರ ವಿರುದ್ದ ಜೂನ್ 22 ಪ್ರಕರಣ ದಾಖಲಾಗಿದೆ ಎಂದಿದ್ದಾರೆ.