ಅಹಮದಾಬಾದ್, ಜೂ 28(DaijiworldNews/PY) : ಗುಜರಾತ್ ಮಾಜಿ ಸಿಎಂ ಶಂಕರ್ಸಿಂಗ್ ವಘೇಲ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವಘೇಲ ಅವರ ಆಪ್ತರು ತಿಳಿಸಿದ್ದಾರೆ.
ವಘೇಲ ಅವರನ್ನು ವೈದ್ಯರ ಸಲಹೆಯಂತೆ ಮನೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ಅವರನ್ನು ಶನಿವಾರ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ವಘೇಲ ಅವರಿಗೆ ಕೊರೊನಾ ದೃಢಪಟ್ಟಿದ್ದು, ಅವರನ್ನು ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.