ತಿರುವನಂತನಪುರಂ, ಜೂ 29 (Daijiworld News/MSP): ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳದ ರೆಹಾನಾ ಫಾತಿಮಾ ಈಗ ಬಂಧನ ಭೀತಿಯಲ್ಲಿದ್ದಾರೆ
ಹೀಗಾಗಿ ಜಾಮೀನು ನೀಡುವಂತೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ. ತನ್ನ ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಚಿತ್ರ ಬಿಡಿಸಿಕೊಂಡ ಆರೋಪ ಇವರ ಮೇಲಿದೆ.
ಅರೆನಗ್ನವಾಗಿ ಮಲಗಿ ಇಬ್ಬರು ಮಕ್ಕಳಿಂದ ತಮ್ಮ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸಂಬಂಧ ಬಿಜೆಪಿ ಮೋರ್ಚಾ ಮುಖಂಡ ಎವಿ ಅರುಣ್ ಪ್ರಕಾಶ್, ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದರೊಂದಿಗೆ ಕೇರಳದದ ಮಕ್ಕಳ ಹಕ್ಕು ಸಂರಕ್ಷಣಾ ಅಯೋಗ 10 ದಿನಗಳೊಳಗಾಗಿ ವರದಿ ನೀಡುವಂತೆ ಪತ್ತನಂತ್ತಿಟ್ಟ ಜಿಲ್ಲಾ ಪೊಲೀಸರಿಗೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಬಂಧನದ ಭೀತಿಯಲ್ಲಿರುವ ರೆಹಾನಾ ಫಾತಿಮಾ ಜಾಮೀನು ನೀಡುವಂತೆ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.