ನವದೆಹಲಿ, ಜೂ. 29 (DaijiworldNews/MB) : ದೇಶದಲ್ಲಿ ಕಳೆದ ಒಂದು ದಿನದಲ್ಲೇ 19,459 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು , 380 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5,48,318 ಕ್ಕೆ ಏರಿಕೆಯಾಗಿದ್ದರೆ ಈವರೆಗೆ 16,475 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕು ಏರಿಕೆಯ ನಡುವೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ಕೂಡಾ ಏರಿಕೆಯಾಗುತ್ತಲ್ಲಿದ್ದು 5,48,318 ಸೋಂಕಿತರ ಪೈಕಿ 3,21,723 ಗುಣಮುಖರಾಗಿದ್ದು 2,10,120 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿನದಿಂದ ದಿನಕ್ಕೆ ಅಧಿಕ ಪ್ರಮಾಣದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಮಹಾರಾಷ್ಟ್ರದಲ್ಲಿ 1,64,626 ಜನರಿಗೆ ಸೋಂಕು ದೃಢಪಟ್ಟಿದ್ದು 7,429 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 86,575 ಮಂದಿ ಗುಣಮುಖರಾಗಿದ್ದು 70,622 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ರಾಜ್ಯ ಮಹಾರಾಷ್ಟ್ರವಾಗಿದೆ.
ಕರ್ನಾಟಕದಲ್ಲಿ ಒಂದು ದಿನದಲ್ಲಿ 1267 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 13190 ಕ್ಕೆ ಏರಿದೆ. ಹಾಗೆಯೇ ಒಂದು ದಿನದಲ್ಲಿ 16 ಮಂದಿ ಸಾವನ್ನಪ್ಪಿದ್ದು ಒಟ್ಟು 207 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 5476 ಸಕ್ರಿಯ ಪ್ರಕರಣಗಳಾಗಿದ್ದು 7507 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 82275, ದೆಹಲಿಯಲ್ಲಿ 83077, ಗುಜರಾತ್ನಲ್ಲಿ 31320, ಉತ್ತರ ಪ್ರದೇಶದಲ್ಲಿ 22147, ಮಧ್ಯಪ್ರದೇಶದಲ್ಲಿ 13186, ಪಶ್ಚಿಮ ಬಂಗಾಳದಲ್ಲಿ 17283, ರಾಜಸ್ತಾನದಲ್ಲಿ 17271, ತೆಲಂಗಾಣದಲ್ಲಿ 14419, ಹರ್ಯಾಣದಲ್ಲಿ 13829 ಹಾಗೂ ಆಂಧ್ರಪ್ರದೇಶದಲ್ಲಿ 13241 ಕೊರೊನಾ ಪ್ರಕರಣಗಳು ದಾಖಲಾಗಿದೆ.