ಶ್ರೀನಗರ, ಜೂ. 29 (DaijiworldNews/MB) : ಸೋಮವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖುಲ್ಚೋಹರ್ ಪ್ರದೇಶದಲ್ಲಿ ಹತ್ಯೆಗೈದ ಮೂವರು ಉಗ್ರರ ಪೈಕಿ ಓರ್ವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಕೂಡಾ ಸೇರಿದ್ದು ಇದರಿಂದಾಗಿ ದೊಡಾ ಜಿಲ್ಲೆ ಭಯೋತ್ಪಾದಕ ಮುಕ್ತವಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ಜಂಟಿಯಾಗಿ ಇಂದು ಮುಂಜಾನೆ ಕಾರ್ಯಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಮಸೂದ್ ಅಹ್ಮದ್ ಭಟ್ ಹಾಗೂ ಮತ್ತಿಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದರುಳಿಸಿದೆ.
ಉಗ್ರರಿಂದ ಒಂದು ಎಕೆ ರೈಫಲ್ ಮತ್ತು ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕೂಡಾ ಕಾಶ್ಮೀರದಲ್ಲಿ 29 ವಿದೇಶಿ ಉಗ್ರರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮಸೂದ್ ಅತ್ಯಾಚಾರ ಪ್ರಕರಣ ಒಂದರ ಆರೋಪಿಯಾಗಿದ್ದು ಪೊಲೀಸರಿಂದ ತಪ್ಪಿಸಿಕೊಂಡು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಎಂದು ತಿಳಿದು ಬಂದಿದೆ.