ಹೈದರಬಾದ್, ಜೂ 29 (Daijiworld News/MSP): "ನನಗೆ ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ, ನಾವು, ವೈದ್ಯರು ನರ್ಸ್ ಗಳ ಬಳಿ ಗೋಗೆರೆದರೂ 3 ಗಂಟೆಗಳಿಂದ ಆಮ್ಲಜನಕ ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ನನ್ನ ಹೃದಯ ಸ್ಥಗಿತಗೊಳ್ಳುವ ಅನುಭವವಾಗುತ್ತಿದೆ, ನಿಮಗೆಲ್ಲರಿಗೂ ಗುಡ್ ಬೈ ಅಪ್ಪಾ" ಹೀಗೊಂದು ಸಂದೇಶ ಕೊರೊನಾ ಸೋಂಕಿತ ತನ್ನ ತಂದೆಗೆ ಆಸ್ಪತ್ರೆಯಿಂದ ಕಳುಹಿಸಿದ್ದು, ಇದಾಗಿ ಒಂದೇ ಗಂಟೆಯಲ್ಲಿ ಆತ ಮೃತಪಟ್ಟಿದ್ದ.
ಸಾಂದರ್ಭಿಕ ಚಿತ್ರ
ಈ ಘಟನೆ ಹೈದರಾಬಾದ್ನ ಕೊವೀಡ್ ಆಸ್ಪತ್ರೆಯಲ್ಲಿ ನಡೆದಿದ್ದು , ಅಲ್ಲಿ ದಾಖಲಾಗಿದ್ದ 34 ವರ್ಷದ ಸೋಂಕಿತ ತಾನು ಬದುಕುವ ಸಾಧ್ಯತೆ ಇನ್ನು ಕಡಿಮೆ ಎಂದು ಎಂದು ತೋಚತ್ತಿದ್ದಂತೆ ತನ್ನ ಅಪ್ಪನಿಗೆ ಒಂದು ಸೆಲ್ಫೀ ವಿಡಿಯೋ ಕಳುಹಿಸಿದ್ದ. ಆದರೆ ವಿಪರ್ಯಾಸವೆಂದ ಮಗನ ಈ ಸಂದೇಶ ತಂದೆ ಗಮನಿಸಿದ್ದು ಆತಮೃತಪಟ್ಟ ಬಳಿಕ.
ಮಗ ಮೃತಪಟ್ಟ ಸುದ್ದಿ ತಿಳಿದು, ಆತನ ಅಂತ್ಯಕ್ರಿಯೆಯನ್ನು ಮುಗಿಸಿದ ಮನೆಗೆ ಬಂದ ಅಪ್ಪ ತನ್ನ ಮೊಬೈಲ್ ನೋಡಿದಾಗ ಮಗ ಕಳುಹಿಸ ಸೆಲ್ಪಿ ವಿಡಿಯೋ ಸಂದೇಶ ಗಮನಿಸಿದ್ದಾರೆ. ಆ ವಿಡಿಯೋ ಮೆಸೇಜ್ ಕಳುಹಿಸಿದ ಒಂದೇ ಗಂಟೆಯಲ್ಲಿ ಆತ ಮೃತಪಟ್ಟಿದ್ದ ಸುದ್ದಿ ಆಸ್ಪತ್ರೆಯಿಂದ ತಂದೆಗೆ ಬಂದಿತ್ತು.
ತೀವ್ರವಾದ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನನ್ನು ಆತನ ತಂದೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೊರೊನಾ ಭೀತಿಯಿಂದ 10 ಖಾಸಗಿ ಆಸ್ಪತ್ರೆಯವರು ಆತನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಕೊನೆಗೆ ವಿಧಿಯಿಲ್ಲದೆ ಆತನನ್ನು ಹೈದರಾಬಾದ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಸಾವನ್ನಪ್ಪಿದ ಬಳಿಕ ಬಂದ ವೈದ್ಯಕೀಯ ವರದಿಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಮಗನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ತಂದೆ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು, ಇದು ವೈರಲ್ ಆಗಿದೆ. ಆದರೆ ಇದೆಲ್ಲವನ್ನು ನಿರಾಕರಿಸುರುವ ಆಸ್ಪತ್ರೆಯ ಸಿಬ್ಬಂದಿ ಆತನನ್ನು ನಾವು ವೆಂಟಿಲೇಟರ್ನಲ್ಲೇ ಇರಿಸಿದ್ದೆವು. ಆಕ್ಸಿಜನ್ ಕೊಟ್ಟರೂ ಆತ ಬದುಕಲಿಲ್ಲ ಎಂದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.