ನವದೆಹಲಿ, ಜೂ. 29 (DaijiworldNews/SM): ದೇಶದಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ತೆರವುಗೊಳಿಸಿ ಇದೀಗ ಒಂದು ತಿಂಗಳಾಗುತ್ತಿದೆ. ಮೊದಲ ಅವಧಿ ಪೂರ್ಣಗೊಳ್ಳುತ್ತಿದೆ. ಈ ನಡುವೆ ಮತ್ತೆ ಎರಡನೇ ಅನ್ ಲಾಕ್ ಅವಧಿ ಘೋಷಿಸಲಾಗಿದೆ.
ಜುಲೈ 1ರಿಂದ 31ರ ಅವಧಿಯಲ್ಲಿ ದೇಶದಲ್ಲಿ 'ಅನ್ ಲಾಕ್ 2' ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದ್ದು, ಇದಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೇಂದ್ರದ ಹೊಸ ಮಾರ್ಗಸೂಚಿಯ ಪ್ರಕಾರ ಶಾಲೆ, ಕಾಲೇಜುಗಳು ಜುಲೈ 31 ರವರೆಗೆ ತೆರೆಯುವಂತಿಲ್ಲ ಎಂಬುವುದಾಗಿ ಖಡಕ್ ಆದೇಶ ಮಾಡಲಾಗಿದೆ. ಈ ನಡುವೆ ಆನ್ ಲೈನ್ ಶಿಕ್ಷಣ ಹಾಗೂ ದೂರದರ್ಶನ ಶಿಕ್ಷಣಕ್ಕೆ ಅವಕಾಶವಿದೆ.
ಇನ್ನು ಈ ನಡುವೆ ಜುಲೈ 1ರಿಂದ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರಲಿದೆ. ಇನ್ನು ಕಂಟೈನ್ಮೆಂಟ್ ವಲಯಗಳಲ್ಲಿ ಯಥಾಸ್ಥಿತಿ ಜಾರಿಯಲ್ಲಿರಲಿದ್ದು ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಇನ್ನು ಮೆಟ್ರೋ ರೈಲು ಸಂಚಾರ, ಚಿತ್ರಮಂದಿರಗಳು, ಜಿಮ್ ಗಳು, ಬಾರ್ಗಳು, ಸ್ವಿಮ್ಮಿಂಗ್ ಫೂಲ್, ಮನೋರಂಜನಾ ಪಾರ್ಕ್ ಬಂದ್ ಆಗಿರಲಿವೆ. ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾಯಾನ ಹಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಹಂತ ಹಂತವಾಗಿ ದೇಶೀ ವಿಮಾನ ಹಾರಾಟ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದಾಗಿ ತಿಳಿಸಲಾಗಿದೆ.