ನವದೆಹಲಿ, ಜೂ 30(DaijiworldNews/PY) : ಭಾರತದಲ್ಲಿ 59 ಚೀನೀ ಆ್ಯಪ್ಗಳನ್ನು ನಿಷೇಧಿಸುವ ಆದೇಶವನ್ನು ಭಾರತ ಸರ್ಕಾರ ಹೊರಡಿಸಿದ ಕೆಲವೇ ಗಂಟೆಗಳ ನಂತರ, ಈ ಆದೇಶಕ್ಕೆ ಸ್ಪಂದಿಸಲು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸಲು ಸರ್ಕಾರವನ್ನು ಭೇಟಿ ಮಾಡಲು ಸಂಬಂಧಪಟ್ಟವರನ್ನು ಆಹ್ವಾನಿಸಲಾಗಿದೆ ಎಂದು ಟಿಕ್ಟಾಕ್ ದೃಢಪಡಿಸಿದೆ.
ಟಿಕ್ಟಾಕ್ ಸೇರಿದಂತೆ 59 ಆ್ಯಪ್ಗಳನ್ನು ನಿರ್ಬಂಧಿಸಲು ಭಾರತ ಸರ್ಕಾರ ಮಧ್ಯಂತರ ಆದೇಶ ಹೊರಡಿಸಿದೆ ಮತ್ತು ನಾವು ಅದನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಪ್ರತಿಕ್ರಿಯಿಸಲು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸಲು ಅವಕಾಶಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಮಧ್ಯಸ್ಥಗಾರರನ್ನು ಭೇಟಿ ಮಾಡಲು ನಮ್ಮನ್ನು ಆಹ್ವಾನಿಸಲಾಗಿದೆ ಎಂದು ಭಾರತದ ಟಿಕ್ಟಾಕ್ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದು, ಭವಿಷ್ಯದಲ್ಲಿ ಹಾಗೇ ಮಾಡಲು ವಿನಂತಿ ಮಾಡಿದರೂ ಅವರು ಹಾಗೆ ಮಾಡುವುದಿಲ್ಲ ಎಂದು ಗಾಂಧಿ ಒತ್ತಾಯಿಸಿದ್ದಾರೆ. ನಾವು ಟಿಕ್ಟಾಕ್ ಬಳಕೆದಾರರ ಗೌಪ್ಯತೆ ಹಾಗೂ ಸಮಗ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಎಂದಿದ್ದಾರೆ.
14 ಭಾರತೀಯ ಭಾಷೆಗಳಲ್ಲಿ ಟಿಕ್ಟಾಕ್ ಲಭ್ಯವಿದ್ದು, ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಟಿಕ್ಟಾಕ್ ಅನ್ನು ನೂರು ಮಿಲಿಯನ್ ಬಳಕೆದಾಕೆದಾರರು ತಮ್ಮ ಜೀವಾನಾಧಾರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.