ಕಾರವಾರ, ಜೂ 30(DaijiworldNews/PY) : ಸಮೋಸಾ ತಿನ್ನುವ ಸಂದರ್ಭ ಗಂಟಲಲ್ಲಿ ಸಿಲುಕಿ ಬೌದ್ದ ಭಿಕ್ಷು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
ಮೃತಪಟ್ಟ ಬೌದ್ದ ಭಿಕ್ಷು ಮಂಗೋಲಿಯಾ ದೇಶದ ಬಯಾರ್ಜವಖ್ಲನ್ ದಾಶ್ದೋರ್ಜ (18) ಎಂದು ಗುರುತಿಸಲಾಗಿದೆ.
ಬಯಾರ್ಜವಖ್ಲನ್ ದಾಶ್ದೋರ್ಜ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ.2 ವಸತಿ ನಿಲಯವೊಂದರಲ್ಲಿ ವಾಸವಾಗಿದ್ದರು. ಸೋಮವಾರದಂದು ತನ್ನ ಕೊಠಡಿಯಲ್ಲಿ ಸಮೋಸ ತಿನ್ನುವ ಸಂದರ್ಭ ಗಂಟಲಿನಲ್ಲಿ ಸಿಲುಕಿಕೊಂಡಿದ್ದು, ಈ ವೇಳೆ ಉಸಿರಾಡಲಾಗದೇ ಆತ ಸಾವನ್ನಪ್ಪಿದ್ದಾನೆ.
ಘಟನೆಯ ಬಗ್ಗೆ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.