ನವದೆಹಲಿ, ಜೂ 30(DaijiworldNews/PY) : ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದ ಸಂದರ್ಭ ಚೀನಾದ ಆಮದು ಪ್ರಮಾಣ ಶೇ.14ಕ್ಕಿಂತ ಕಡಿಮೆ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಬಳಿಕ ಚೀನಾದ ಆಮದು ಪ್ರಮಾಣ ಶೇ.18 ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಭಾರತಕ್ಕೆ ಚೀನಾ ಆಮದು ಪ್ರಮಾಣದ ಗ್ಯಾಫ್ವೊಂದನ್ನು ಉಲ್ಲೇಖ ಮಾಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯನ್ನು ವ್ಯಂಗ್ಯ ಮಾಡಿದ್ದಾರೆ.
ಮೇಕ್ ಇನ್ ಇಂಡಿಯಾವನ್ನು ಬಿಜೆಪಿ ಹಾಗೂ ಎನ್ಡಿಎ ಸರ್ಕಾರ ಪ್ರೋತ್ಸಾಹಿಸುತ್ತದೆ. ಆದರೆ, ಅತೀ ಹೆಚ್ಚಾಗಿ ಚೀನಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆ್ಯಪ್ ಬ್ಯಾನ್ ಮಾಡಿದರೆ ಸತ್ಯ ಸುಳ್ಳಾಗಲಾರದು ಎಂದಿದ್ಧಾರೆ.