ಶ್ರೀನಗರ, ಜು. 01 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಸೊಪೊರ್ನಲ್ಲಿ ಉಗ್ರರು ದಾಳಿಗೆ ಸಿಆರ್ಪಿಎಫ್ ಯೋಧ ಹಾಗೂ ಓರ್ವ ನಾಗರಿಕ ಬಲಿಯಾಗಿದ್ದು ಮೂವರು ಯೋಧರು ಹಾಗೂ ನಾಗರಿಕರೊಬ್ಬರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಸೊಪೊರ್ನಲ್ಲಿ ಗಸ್ತಿನಲ್ಲಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದು ಸಿಆರ್ಪಿಎಫ್ ಯೋಧ ಹಾಗೂ ಓರ್ವ ನಾಗರಿಕ ಹತ್ಯೆಯಾಗಿದ್ದಾರೆ. ಈ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಆ ಪ್ರದೇಶದಲ್ಲಿ ಭದ್ರತಾ ಪಡೆ ಸುತ್ತುವರಿದಿದೆ ಎಂದು ತಿಳಿಸಿದ್ದಾರೆ.