ನವದೆಹಲಿ, ಜು 01 (Daijiworld News/MSP): ಆನ್ ಲೈನ್ ಕ್ಲಾಸ್ ಗೆ ಸರ್ಕಾರದಿಂದ ಗ್ರೀನ್ ಸಿಗ್ನಿಲ್ ಸಿಗುತ್ತಿದ್ದಂತೆ ಅತ್ತ ಶೈಕ್ಷಣಿಕ ಸಂಸ್ಥೆಗಳು ಪೋಷಕರಿಂದ ಶಾಲಾ ಶುಲ್ಕ ವಸೂಲಿಗೆ ಮುಂದಾಗಿದೆ. ಹೀಗಾಗಿ ಶುಲ್ಕ ಪಾವತಿಗೆ ತಡೆ ತರಬೇಕೆಂದು ವಿವಿಧ ರಾಜ್ಯಗಳ ಪೋಷಕರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟವುಂಟಾಗಿದ್ದು, ಶಾಲಾ ಶುಲ್ಕ ಪಾವತಿಸುವುದನ್ನು ಮುಂದೂಡಬೇಕು ಅಥವಾ ಶುಲ್ಕ ಪಾವತಿಗೆ ತಡೆ ತರಬೇಕೆಂದು ಅರ್ಜಿಯಲ್ಲಿ ವಿನಂತಿಸಿದ್ದಾರೆ.
ಶಾಲೆಗಳು ಪ್ರಾರಂಭವಾಗುವವರೆಗೆ ಶಾಲೆಗಳು ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಬೇಕು , ಶಾಲೆಗಳು ತೆರೆಯದಿರುವುದರಿಂದ ಆನ್ ಲೈನ್ ವರ್ಚುವಲ್ ತರಗತಿಗಳನ್ನು ನಡೆಸಲು ಎಷ್ಟು ವೆಚ್ಚವಾಗುತ್ತದೆಯೋ ಅದು ಮಾತ್ರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಶಾಲೆಗಳು ಪುನರಾರಂಭವಾಗುವವರೆಗೆ ಅನ್ವಯವಾಗುವಂತೆ ಖಾಸಗಿ ಅನುದಾನ ರಹಿತ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗಳ ಶಾಲಾ ಆಡಳಿತ ಮಂಡಳಿಗೆ ಆದೇಶ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕೆಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.