ಮುಂಬೈ, ಜು. 01 (DaijiworldNews/MB) : ಕೊರೊನಾ ಕಾರಣದಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈನ ಲಕ್ಷಾಂತರ ಮಂದಿ ಸೇರಿ ಆಚರಿಸುವ ಗಣೇಶೋತ್ಸವ ರದ್ದಾಗಿದೆ.
ಮುಂಬೈನ ಲಾಲ್ಬೌಚಾ ರಾಜ ಗಣೇಶೋತ್ಸವ ಮಂಡಲ ನಡೆಸುತ್ತಿದ್ದ ಗಣೇಶೋತ್ಸವವನ್ನು ಈ ಬಾರಿ ರದ್ದು ಮಾಡಲಾಗಿದ್ದು ಉತ್ಸವದ ಬದಲಾಗಿ ರಕ್ತದಾನ ಶಿಬಿರ ನಡೆಸಲು ಹಾಗೂ ಹಬ್ಬದ ದಿನವೂ ಕೂಡಾ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ತೀರ್ಮಾನ ಕೈಗೊಂಡಿದೆ.
ಗಣೇಶೋತ್ಸವಕ್ಕೇ ಇನ್ನು ಒಂದು ತಿಂಗಳು ಬಾಕಿ ಉಳಿದಿದ್ದು ಏತನ್ಮಧ್ಯೆ ಗಣೇಶೋತ್ಸವ ರದ್ದಿನ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಗಣೇಶ ಚತುರ್ಥಿಯ ಅಂಗವಾಗಿ "ರಕ್ತದಾನ ಶಿಬಿರ, ಪ್ಲಾಸ್ಮಾದಾನ ಶಿಬಿರಗಳು ಮೊದಲಾದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹಾಗೆಯೇ ಎಲ್ಒಸಿ, ಎಲ್ಎಸಿಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಕೂಡಾ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷವು ಕೂಡಾ ಮುಂಬೈ ನ ಲಾಲ್ಬೌಚಾ ರಾಜ ಗಣೇಶೋತ್ಸವನ್ನು ಅದ್ದೂರಿಯಾಗಿ ನಡೆಸಾಗುತ್ತಿದ್ದು ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಉತ್ಸವ ರದ್ದು ಮಾಡಲಾಗಿದೆ.