ತೆಲಂಗಾಣ, ಜು 01(DaijiworldNews/PY): ಆಹಾರ ಅರಸಿಕೊಂಡು ಕೋತಿಯೊಂದನ್ನು ಥಳಿಸಿ, ಗಲ್ಲಿಗೇರಿಸಿದ ಅಮಾನವೀಯ ಘಟನೆ ತೆಲಂಗಾಣದ ಖಮ್ಮಂ ಅಮ್ಮಪಲೆಂ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹಸಿವಿನಿಂದಾಗಿ ಕೋತಿಯೊಂದು ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದಿತ್ತು. ಹಳ್ಳಿಗರ ಗುಂಪೊಂದು ಕೋತಿಯನ್ನು ಹಿಡಿಯಲು ಹೊಂಚು ಹಾಕಿದ್ದು, ಬಳಿಕ ಕೋತಿಯನ್ನು ಸೆರೆಹಿಡಿದಿದ್ದಾರೆ. ಸೆರೆಹಿಡಿದ ಜನ ಕೋತಿಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಅಲ್ಲದೇ ಹಗ್ಗ ಕಟ್ಟಿ ಗಲ್ಲಿಗೇರಿಸಿದ್ದಾರೆ. ಕೋತಿಯನ್ನು ಥಳಿಸಿದ ಈ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋತಿಯನ್ನು ಥಳಿಸಿ, ಗಲ್ಲಿಗೇರಿಸಿದ್ದು ಅಲ್ಲದೇ, ಅದನ್ನು ಬಿಡುಗಡೆಗೊಳಿಸಿದ ಬಳಿಕ ನಾಯಿಯನ್ನು ಬಿಟ್ಟು ತಮಾಷೆ ನೋಡಿದ್ದಾರೆ.
ಖಮ್ಮಂ ಜಿಲ್ಲೆಯಲ್ಲಿ ಅಮ್ಮಪಲೆಂ ಗ್ರಾಮದ ಜನರು ಒಂದು ಮಂಗವನ್ನು ಕೊಂದು ಗಲ್ಲಿಗೇರಿಸಿದರು. ಜನರಿಗೆ ಮಾನವೀಯತೆ ಇಲ್ಲ ಎಂದು ಟ್ವಿಟ್ಟರ್ ಬಳಕೆದಾರರೊಬ್ಬ ಉಲ್ಲೇಖಿಸಿದ್ದಾರೆ.
ಘಟನೆಯ ಸಂಬಂಧ, ಅರಣ್ಯ ಅಧಿಕಾರಿಗಳು ಅಮ್ಮಂಪಲೆ ನಿವಾಸಿ ವೆಂಕಟೇಶ್ವರ್ ಹಾಗೂ ಉಳಿದ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪ ಮಾಡಿ ಬಂಧಿಸಿದ ನಂತರ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.