ನವದೆಹಲಿ, ಜು 01 (Daijiworld News/MSP): ’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಅತಿ ಹೆಚ್ಚು ಜನರನ್ನು ಬಡತನಕ್ಕೆ ತಳ್ಳಿದೆ’ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಆರೋಪಿಸಿದ್ದಾರೆ.
ದೇಶದಲ್ಲಿ ಬಡ ಜನರ ಸಂಖ್ಯೆ ಹೆಚ್ಚುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಗುರುತಿಸಲು ಹೊಸ ಸಮೀಕ್ಷೆ ನಡೆಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 270 ದಶಲಕ್ಷಕ್ಕೂ ಹೆಚ್ಚು ಜನರನ್ನು ಕಡುಬಡತನದಿಂದ ಮೇಲೆತ್ತಲು ಸಾಧ್ಯವಾಯಿತು ಎಂದು ಇದೇ ವೇಳೆ ತಿವಾರಿ ಸ್ಪಷ್ಟನೆ ನೀಡಿದ್ದಾರೆ.
2004 -14 ರ ನಡುವೆ ಯುಪಿಎ ಸರ್ಕಾರ 271 ಮಿಲಿಯನ್ ಜನರನ್ನು ಬಡತನದಿಂದ ಹೊರಬರುವಂತೆ ಮಾಡಿತು ಆದರೆ. 2014 ಮತ್ತು 2020 ರ ನಡುವೆ ಎನ್ಡಿಎ / ಬಿಜೆಪಿ ಆಡಳಿತದ ಸರ್ಕಾರ ಗಣನೀಯ ಸಂಝ್ಯೆಯಲ್ಲಿ ಜನರನ್ನು ಮತ್ತೆ ಬಡತನಕ್ಕೆ ತಳ್ಳಿತು. ಇದಕ್ಕೆ ಪೂರಕವೆಂಬಂತೆ ಹಲವಾರು ಬಾರಿ ಪ್ರಧಾನಮಂತ್ರಿಗಳು ತಮ್ಮಭಾಷಣದಲ್ಲಿ ’ 20 ಕೋಟಿ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ" ಎಂದು ಹೇಳಿದ್ದಾರೆ. ಹೀಗಾಗಿ ದೇಶದಲ್ಲಿ ಮತ್ತೊಮ್ಮೆ ಹೊಸ ಬಡತನ ಸಮೀಕ್ಷೆ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.