ನವದೆಹಲಿ, ಜು 01 (Daijiworld News/MSP): ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾಪಡೆಯೊಂದಿಗೆ ಚೀನಾದ ಸೇನೆ ನಡೆಸಿದ ಹಿಂಸಾತ್ಮಕ ಮುಖಾಮುಖಿ ಬಳಿಕ ಗ್ಲೋಬಲ್ ಟೈಮ್ಸ್ ಸಂಪಾದಕ ಹೂ ಕ್ಸಿಜಿನ್ ಮತ್ತೊಮ್ಮೆ ಭಾರತವನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದು , ಇದಕ್ಕೆ ಭಾರತೀಯ ಉದ್ಯಮಿ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಈಗಾಗಲೇ ಜನರು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಚೀನಾ ಆಪ್ ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿ, ಭಾರತೀಯ ಸರಕುಗಳನ್ನು ಅಪಹಾಸ್ಯ ಮಾಡಿರುವ ಗ್ಲೋಬಲ್ ಟೈಮ್ಸ್ ಸಂಪಾದಕ ಹೂ ಕ್ಸಿಜಿನ್ " ಒಳ್ಳೆಯದು, ಚೀನಾದ ಜನರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಬಯಸಿದ್ದರೂ ಸಹ, ಅವರಿಗೆ ಭಾರತೀಯ ವಸ್ತುಗಳೇ ಸಿಗುತ್ತಿಲ್ಲ. ಭಾರತೀಯ ಸ್ನೇಹಿತರೇ, ನೀವು ರಾಷ್ಟ್ರೀಯತೆಗಿಂತಲೂ ಮುಖ್ಯವಾದ ಇತರ ವಿಚಾರಗಳ ಕಡೆ ಗಮನಹರಿಸಿ" ಎಂದು ಟ್ವೀಟ್ ಮಾಡಿದ್ದರು.
ಗ್ಲೋಬಲ್ ಟೈಮ್ಸ್ ಸಂಪಾದಕರಿಗೆ ಸೂಕ್ಷ್ಮವಾಗಿ ಅವರದೇ ದಾಟಿಯಲ್ಲಿ ಪ್ರತುತ್ತರ ನೀಡಿದ ಉತ್ತರ ಆನಂದ್ ಮಹೀಂದ್ರಾ " ಈ ನಿಮ್ಮ ಕಮೆಂಟ್ ,ಅತ್ಯಂತ ಪರಿಣಾಮಕಾರಿ. ನಮ್ಮನ್ನು ಪ್ರೇರೇಪಿಸುವ ಮಾತು ಎಂದು ಭಾವಿಸುತ್ತೇವೆ . ನಿಮ್ಮ ಪ್ರಚೋದನೆಗೆ ಧನ್ಯವಾದಗಳು. ನಾವು ಈ ಸಂದರ್ಭಕ್ಕೆ ಏರುತ್ತೇವೆ" ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸರಕುಗಳನ್ನು ಉತ್ಪಾದಿಸುವುದಿಲ್ಲ ಎಂಬ "ಚೀನೀ ಪ್ರಚೋದನೆಯನ್ನು" ಎದುರಿಸುವ ಸಂದರ್ಭಕ್ಕೆ ಏರುತ್ತೇವೆ ಎನ್ನುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ನಿಮ್ಮ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಪ್ರವೇಶವನ್ನು ನೀವು ನಿರಾಕರಿಸುತ್ತಿದ್ದೀರಿ ಎಂದು ಒಪ್ಪಿಕೊಂಡಿದ್ದಕ್ಕಾಗಿ ಮತ್ತು ಭಾರತದಲ್ಲಿ ನಿಮ್ಮ ಉತ್ಪನ್ನಗಳನ್ನು ಡಂಪ್ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದು ಐಎಎಸ್ ಸಂಜಯ್ ದೀಕ್ಷಿತ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.