ಬೆಂಗಳೂರು, ಜು 01 (Daijiworld News/MSP): ಜಗತ್ತಿನಾದ್ಯಂತ ವಿಜ್ಞಾನಿಗಳು ಮಹಾಮಾರಿ ಕೊರೊನಾಗೆ ಔಷಧ ಪತ್ತೆ ಹಚ್ಚಲು ನಿರಂತರ ಸಂಶೋಧನೆಯಲ್ಲಿ ತೊಡಗಿರುವಾಗ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಿಂದ ಕೊರೊನಾ ಸೋಂಕಿಗೆ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಿಂದ ದೃಢಪಟ್ಟಿದೆ.
ಇದು ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಭಾರತದ ಮತ್ತೊಂದು ಮಹತ್ವದ ಮೈಲುಗಲ್ಲು ಎಂದರೂ ತಪ್ಪಾಗಲಾರದು. ಸರ್ಕಾರದ ಮಾರ್ಗಸೂಚಿಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ಸು ಕಂಡಿದ್ದು ಕೇವಲ 9 ದಿನದಲ್ಲಿ ಕೊರೋನಾ ಪಾಸಿಟಿವ್ ರೋಗಿಗಳು ಗುಣಮುಖರಾಗಿ ನೆಗೆಟಿವ್ ವರದಿ ಪಡೆದಿದ್ದಾರೆ.
ಜೂ.7ರಿಂದ ಜೂ.25ರವರೆಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದ್ದು 23 ವರ್ಷದಿಂದ 65 ವರ್ಷದವರೆಗಿನ ಸೋಂಕಿತರು ಟ್ರಯಲ್ಗೆ ಒಳಪಟ್ಟಿದ್ದು, ಎಲ್ಲರೂ ಸೋಂಕಿನ ಗುಣಲಕ್ಷಣ ಹೊಂದಿದ್ದರು. ಇವರೆಲ್ಲರೂ ಚಿಕಿತ್ಸೆ ಪಡೆದ ಕೇವಲ 9 ದಿನದಲ್ಲಿಗುಣಮುಖರಾಗಿದ್ದರು. ಮಾತ್ರವಲ್ಲದೆ ಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಗಂಭೀರ ಸಮಸ್ಯೆಯನ್ನು ಹೊಂದಿವರ ಮೇಲೂ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದ್ದು ಪರಿಣಾಮಕಾರಿಯಾಗಿ ಯಶಸ್ಸು ಕಂಡಿದೆ.
ಹೀಗಾಗಿ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ಔಷಧಿಯ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ಕೊರೊನಾ ವ್ಯಾಪಕವಾಗಿ ಹರಡಲು ಪ್ರಾರಂಭಿಸುತ್ತಿದ್ದಂತೆ ಸಂಶೋಧನೆ ಪ್ರಾರಂಭಿಸಿದ್ದ ಆಯುರ್ವೆದ ವೈದ್ಯ ಡಾ.ಗಿರಿಧರ ಕಜೆ ನೇತೃತ್ವದ ತಂಡ ಔಷಧಿಪ್ರಯೋಗ ನಡೆಸಲು ಅವಕಾಶ ಕೊಡಿ ಎಂದು ಸರ್ಕಾರ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಜನರ ಒತ್ತಾಯಕ್ಕೆ ಮಣಿದ ಸರ್ಕಾರ ನಿಯಮವಾಳಿ ಪ್ರಕಾರ ಕಜೆಯವರಿಗೆ ಅವಕಾಶ ನೀಡಿತ್ತು. ಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಆದರೆ ಇದೀಗ ಕಜೆಯವರು ಸಂಶೋಧಿಸಿದ ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳು ಚಮತ್ಕಾರವನ್ನೇ ಮಾಡಿದೆ. ಇನ್ನು ವಿಶೇಷವೆಂದರೆ ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ.