ನವದೆಹಲಿ, ಜು. 01 (DaijiworldNews/MB) : ದೇಶದಲ್ಲಿ ಕೊರೊನಾ ಗಂಭೀರವಾಗಿಲ್ಲ ಎಂಬಂತೆ ಬಿಂಬಿಸಲು ಸರ್ಕಾರಗಳ ಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಆದ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ದೆಹಲಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ನಾಲ್ವರು ನರ್ಸ್ಗಳೊಂದಿಗೆ ವಿಡಿಯೋ ಮೂಲಕ ಸಂವಾದ ನಡೆಸಿದ ಅವರು, ದೇಶದಲ್ಲಿ ಕೊರೊನಾ ಗಂಭೀರವಾಗಿಲ್ಲ ಎಂಬಂತೆ ಬಿಂಬಿಸಲು ಸರ್ಕಾರಗಳ ಯತ್ನ ಮಾಡುತ್ತಿದೆ ಎಂದು ದೂರಿದರು.
ವೈದ್ಯರು ಕೊರೊನಾದಿಂದ ಜನರನ್ನು ಉಳಿಸಲು ಅಹಿಂಸಾತ್ಮಕ ಸೈನ್ಯದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ಯೆಯನ್ನು ಮುಚ್ಚಿಡಬಾರದು ಹೊರತಾಗಿ ಅದನ್ನು ಒಪ್ಪಿ ಎದುರಿಸಿ ಹೋರಾಟ ನಡೆಸಬೇಕು ಎಂದು ಹೇಳಿದ್ದು ಸರ್ಕಾರಕ್ಕೆ ಪತ್ರ ಬರೆದು ಕೊರೊನಾದಿಂದ ಸಾವನ್ನಪ್ಪಿದ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸರ್ಕಾರ ಘೋಷಣೆ ಮಾಡಿ ಪರಿಹಾರ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.