ಬೆಂಗಳೂರು, ಜು 01(DaijiworldNews/PY): ಸಿಎಂ ಬಿ.ಎಸ್.ವೈ ಅವರು ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಪಡಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪದಗ್ರಹಣ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಸಿಎಂ ಅವರೇ ಅನುಮತಿ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಹಾಗೂ ಗೃಹ ಮಂತ್ರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಪೊಲೀಸರಿಗೆ ಹಾಗೂ ಸೇವಾದಳದವರಿಗೆ ಕಟ್ಟಡ ನಿರ್ವಹಣೆಯನ್ನು ವಹಿಸಿದೆ. ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದವರಿಗಷ್ಟೇ ಅನುಮತಿ ಹೊರತು ಬೇರೆ ಯಾರಿಗೂ ಅವಕಾಶವಿಲ್ಲ ಎಂದಿದ್ದಾರೆ.
ಜುಲೈ 2ರ ಪ್ರತಿಜ್ಞಾ ದಿನ ಕಾರ್ಯಕ್ರಮಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದ್ದು, ಇದಕ್ಕಾಗಿ ತಾವು ತುಂಬಾ ಶ್ರಮ ವಹಿಸುತ್ತಿದ್ದೀರಿ. ಅಂತಿಮ ತಯಾರಿ ಕುರಿತು ಜುಲೈ 1 ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಜೂಮ್ ಮೂಲಕ ನಿಮ್ಮನ್ನು ಭೇಟಿ ಆಗುವೆ. ಜೂಮ್ ಲಿಂಕನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಾವು ನೀಡಿರುವ ಸಂಖ್ಯೆ ಮಿಸ್ ಕಾಲ್ ನೀಡಿ ಜನರು ಕೂಡಾ ಆಶೀರ್ವಾದ ಮಾಡಬಹುದು. ಕಾರ್ಯಕ್ರಮಕ್ಕೆ ಬರುವವರಿಗೆ ಪಾಸ್ ನೀಡಲಾಗಿದೆ. ಅಲ್ಲದೇ, ಕಾರ್ಯಕ್ರಮಕ್ಕೆ ಕೆಲವು ನಾಯಕರು, ಹೊರ ರಾಜ್ಯದಿಂದು ಕೆಲವು ಜನರು ಸೇರಿದಂತೆ ಮಾಧ್ಯಮದವರಿಗೆ ಮಾತ್ರ ಪಾಸ್ ಕೊಡಲಾಗಿದೆ. ಈ ಕಾರಣದಿಂದಾಗಿ ಅಧಿಕ ಜನರು ಭಾಗವಹಿಸುತ್ತಿಲ್ಲ ಎಂದಿದ್ದಾರೆ.