ನವದೆಹಲಿ, ಜು 01(DaijiworldNews/PY): ಜಂಟಿ ಉದ್ಯಮಗಳೂ ಸೇರಿದಂತೆ ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ಚೀನಾ ಕಂಪನಿಗಳಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕಾಗಿ ಚೀನಾದ ಪಾಲುದಾರರನ್ನು ಹೊಂದಿರುವ ಜಂಟಿ ಉದ್ಯಮಗಳಿಗೆ ನಾವು ಅನುಮತಿ ನೀಡುವುದಿಲ್ಲ. ಚೀನಾ ಕಂಪೆನಿಗಳು ನಮ್ಮ ದೇಶದಲ್ಲಿ ಜಂಟಿ ಉದ್ಯಮದ ಮೂಲಕ ಬಂದರೆ ನಾವು ಅದನ್ನು ಅನುಮತಿಸುವುದಿಲ್ಲ ಎನ್ನುವ ದೃಢವಾದ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ತಮ್ಮ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲು ಚೀನಾದ ಸಂಸ್ಥೆಗಳನ್ನು ನಿಷೇಧಿಸುವುದು ಮತ್ತು ಭಾರತೀಯ ಕಂಪನಿಗಳಿಗೆ ನಿಯಮಗಳನ್ನು ಸಡಿಲಿಸುವ ನೀತಿಯು ಶೀಘ್ರದಲ್ಲೇ ಹೊರಬರಲಿದೆ ಎಂದು ಹೇಳಿದರು.
ಚೀನಾದೊಂದಿಗೆ ನಡೆದ ಗಡಿ ವಿವಾದದ ಹಿನ್ನೆಲೆಯಲ್ಲಿ, ಭಾರತವು ಚೀನಾದ 59 ಆ್ಯಪ್ಗಳನ್ನು ನಿಷೇಧಿಸಿದೆ.