ಚಿಕ್ಕಮಗಳೂರು, ಜು 01(DaijiworldNews/PY): ಲಾಕ್ಡೌನ್ ಮಾಡಿ ಸೋಂಕು ನಿಯಂತ್ರಣ ಮಾಡುತ್ತೇವೆ ಎನ್ನುವುದು ಕನಸಿನ ಮಾತು. ಸೋಂಕು ವ್ಯಾಪಿಸುವ ಸರಪಳಿ ತುಂಡರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಯೋಚನೆ ಮಾಡುತ್ತೇವೆ. ಸದ್ಯಕ್ಕೆ ಎಲ್ಲಾ ಭಾನುವಾರವೂ ಕೂಡಾ ಲಾಕ್ಡೌನ್ ಮಾಡಲು ನಿರ್ಧರಿಸಿದ್ದೇವೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಕೊರೊನಾ ವ್ಯಾಪಿಸುತ್ತಿರುವ ಪ್ರಾರಂಭದಲ್ಲಿ ನಾವು ಲಾಕ್ಡೌನ್ ಮಾಡಿದ್ದು, ಆ ವೇಳೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಪ್ರಮಾಣ ಕಡಿಮೆ ಇದ್ದವು. ಆದರೆ, ಲಾಕ್ಡೌನ್ ಸಡಿಲಿಕೆಯ ನಂತರ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಪುನಃ ಲಾಕ್ಡೌನ್ ಮಾಡಿ ತೆರವುಗೊಳಿಸಿದರೂ ವ್ಯತ್ಯಾಸವೇನು ಇಲ್ಲ ಹೀಗೆ ಆಗುತ್ತದೆ ಎಂದರು.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಜನರ ಸೇವೆಗೆ ಮುಂದಿನ ಆರು ತಿಂಗಳು ಸಜ್ಜಾಗುವಂತೆ ಅಧಿಕಾರಿಗಳಿಗೆ ತಿಳಿಸಿದರು.