ನವದೆಹಲಿ, ಜು. 02 (DaijiworldNews/MB) : ಪತಂಜಲಿ ಸಂಸ್ಥೆಯ ಕೊರೋನಿಲ್ನ ಮಾರಾಟಕ್ಕೆ ಕೇಂದ್ರ ಆಯುಷ್ ಸಚಿವಾಲಯ ಅನುಮತಿ ನೀಡಿದ್ದು ಇದು ಕೊರೊನಾದ ವಿರುದ್ಧದ ಔಷಧಿಯಾಗಿ ಅಲ್ಲ ರೋಗನಿರೋಧಕ ಉತ್ತೇಜಕವನ್ನಾಗಿ ಮಾತ್ರ ಮಾರಾಟ ಮಾಡಲು ಅವಕಾಶ ಎಂದು ತಿಳಿಸಿದೆ.
ಈ ಹಿಂದೆ ಕೊರೋನಿಲ್ನ್ನು ಕೋವಿಡ್ಗೆ ಔಷಧ ಎಂದು ಕೆಲ ದಿನಗಳ ಹಿಂದೆ ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿದ್ದು ಇದನ್ನು ಕೊರೊನಾ ಗುಣಪಡಿಸಲು ಬಳಸಲಾಗುವ ಔಷಧ ಎಂದು ತಾವು ಪ್ರಮಾಣೀಕರಿಸುವವರೆಗೂ ಮಾರಾಟ ಮಾಡುವಂತಿಲ್ಲ ಎಂದು ಆಯುಷ್ ಸಚಿವಾಲಯ ತಿಳಿಸಿತ್ತು.
ಬಳಿಕ ಯೂಟರ್ನ್ ಹೊಡೆದ ಪತಂಜಲಿ ಸಂಸ್ಥೆ ಕೋವಿಡ್ -೧೯ ಗೆ ಔಷಧಿ ತಯಾರಿಸಿದಾಗಿ ನಾವು ಎಲ್ಲೂ ಹೇಳಿಕೊಂಡಿಲ್ಲ. ಇದು ರೋಗನಿರೋಧಕ ಉತ್ತೇಜಕ ಔಷಧ. ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಹೇಳಿದೆ. ಇದೀಗ ಕೇಂದ್ರ ಆಯುಷ್ ಸಚಿವಾಲಯ ಕೊರೋನಿಲ್ನ್ನು ರೋಗನಿರೋಧಕ ಉತ್ತೇಜಕವನ್ನಾಗಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ.