ಬೆಂಗಳೂರು, ಜು. 02 (DaijiworldNews/MB) : ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಸಮಿತಿಯು ಯುಎಇಯ ನಾನಾ ಭಾಗಗಳಲ್ಲಿ ಕರ್ನಾಟಕದ ವಿವಿಧ ಭಾಗದ ಸಂಕಷ್ಟದಲ್ಲಿರುವವರಿಗಾಗಿ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿ ಇಂದು ತಾಯಿನಾಡಿಗೆ ಕಳುಹಿಸಿದೆ.
ದುಬೈ, ಅಬುಧಾಬಿ ಮತ್ತು ಶಾರ್ಜಾ ದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡವರನ್ನು ರಾಸ್ ಅಲ್ ಖೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜುಲೈ 1 ರಂದು ಸಂಜೆ ಐದು ಘಂಟೆಗೆ ಹೊರಟು ರಾತ್ರಿ ಹತ್ತು ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಯುಎಇಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗಾಗಿ ಒಂದು ತಿಂಗಳ ಆಹಾರದ ಕಿಟ್, ಮೆಡಿಕಲ್ ಕಿಟ್ ಮತ್ತು ವಿಮಾನದ ಟಿಕೆಟ್ ಸೇರಿದಂತೆ ಕೋವಿಡ್ ಕಾಲದಲ್ಲಿ ದಾನಿಗಳ ಸಹಾಯದಿಂದ ಹಲವು ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಖಾಸಗಿ ಚಾರ್ಟೆಡ್ ವಿಮಾನವು ಬೆಂಗಳೂರು ಮತ್ತು ಮಂಗಳೂರು ತಲಪಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ಉಪಾಧ್ಯಕ್ಷರಾದ ಶೆರೀಫ್ ಕಾವು ಮತ್ತು ವಿಖಾಯ ಚಯರ್ ಮೇನ್ ನವಾಝ್ ಬಿ ಸಿ ರೋಡ್ ಅವರು ಪ್ರಯಾಣಿಕರ ಬೀಳ್ಕೊಡುಗೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
168 ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಹೊತ್ತು ಹೊರಟ ರಾಸಲ್ ಖೈಮಾ ಮೂಲದ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ, ಕೆಲಸ ಕಳೆದುಕೊಂಡವರಿಗೆ ಅವಕಾಶ ಕಲ್ಪಿಸಲಾಗುತ್ತು. ಯುಎಇ ವಿವಿಧ ಭಾಗಗಳಿಂದ ಸಾರಿಗೆ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ಹಾಗೂ ವಿಖಾಯ ತಂಡದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದ್ದರು.