ನವದೆಹಲಿ, ಜು 02 (Daijiworld News/MSP): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದಿಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಲೋಧಿ ಎಸ್ಟೇಟ್ನಲ್ಲಿ ನೀಡಲಾಗಿರುವ 35ನೇ ನಂಬರ್ನ ನಿವಾಸವನ್ನು ಒಂದು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿರುವ ಎಸ್ಪಿಜಿ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿರುವ ಕಾರಣ ಸರ್ಕಾರಿ ಬಂಗಲೆ ತೆರವುಗೊಳಿಸಿವಂತೆ ಆದೇಶದಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಪ್ರಿಯಾಂಕ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆ ಹಿಂಪಡೆದು ಝಡ್+ ಸೆಕ್ಯೂರಿಟಿ ನೀಡಿತ್ತು. ಸರ್ಕಾರದ ನಿಯಮದ ಪ್ರಕಾರ ಎಸ್ಪಿಜಿ ಹಂತದ ಭದ್ರತೆ ಹೊಂದಿರುವವರಿಗೆ ಮಾತ್ರ ಸರ್ಕಾರಿ ಬಂಗಲೆಯಲ್ಲಿ ವಾಸಿಸಲು ಅವಕಾಶವಿರುತ್ತದೆ.
ಕ್ಯಾಬಿನೆಟ್ ವಸತಿ ಸಮಿತಿ(ಸಿಸಿಎ) ವಿಶೇಷ ವಿನಾಯಿತಿ ನೀಡಲು ಅಂಗೀಕರಿಸಿದರೆ ಮಾತ್ರ ಝಡ್+ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯ ಸೌಲಭ್ಯ ಇರುತ್ತದೆ. ಅದರೆ ಈ ವಿನಾಯಿತಿ ಪ್ರಿಯಾಂಕ ಅವರಿಗೆ ದೊರಕಿಲ್ಲ.
ಹೀಗಾಗಿ ಸರ್ಕಾರದ ವತಿಯಿಂದ ಪ್ರಿಯಾಂಕ ಅವರಿಗೆ ನೀಡಲಾಗಿರುವ ನಿವಾಸವನ್ನು ಆಗಸ್ಟ್ 1ರೊಳಗೆ ತೆರವುಗೊಳಿಸಬೇಕು. ಒಂದು ವೇಳೆ ಅಂದು ಖಾಲಿ ಮಾಡಲು ಸಾಧ್ಯವಾಗದಿದ್ದರೆ ಆ ಬಳಿಕ ಹಾನಿ ಶುಲ್ಕ ಹಾಗೂ ದಂಡದ ರೂಪದಲ್ಲಿ ಬಾಡಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ