ಮುಂಬೈ, ಜು. 02 (DaijiworldNews/MB) : ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು ಈವರೆಗೆ 363 ಕೈದಿಗಳು ಹಾಗೂ 102 ಜೈಲು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ಮಹಾರಾಷ್ಟ್ರ ಕಾರಾಗೃಹ ಇಲಾಖೆ ತಿಳಿಸಿದೆ.
363 ಸೋಂಕಿತ ಕೈದಿಗಳ ಪೈಕಿ ಮುಂಬೈ ಸೆಂಟ್ರಲ್ ಜೈಲಿನಲ್ಲಿಯೇ 181 ಪ್ರಕರಣಗಳು ದೃಢಪಟ್ಟಿದ್ದು 151 ಮಂದಿ ಗುಣಮುಖರಾಗಿದ್ದಾರೆ. ಹಾಗೆಯೇ 102 ಸೋಂಕಿತ ಜೈಲು ಸಿಬ್ಬಂದಿಗಳ ಪೈಕಿ 44 ಪ್ರಕರಣಗಳು ಮುಂಬೈ ಸೆಂಟ್ರಲ್ ಜೈಲಿನಲ್ಲಿಯೇ ಪತ್ತೆಯಾಗಿದ್ದು 59 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು 363 ಸೋಂಕಿತ ಕೈದಿಗಳ ಪೈಕಿ 255 ಮಂದಿ ಹಾಗೂ ಒಟ್ಟು 102 ಸೋಂಕಿತ ಜೈಲು ಸಿಬ್ಬಂದಿಗಳ ಪೈಕಿ 82 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿಗೆ 4 ಮಂದಿ ಕೈದಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ.