ನವದೆಹಲಿ, ಜು 02(DaijiworldNews/PY): ಭಾರತೀಯ ಪತ್ರಿಕೆಗಳು ಮತ್ತು ಮಾಧ್ಯಮ ವೆಬ್ಸೈಟ್ಗಳನ್ನು ನಿರ್ಬಂಧಿಸುವ ಚೀನಾದ ಕ್ರಮವನ್ನು ಐಎನ್ಎಸ್ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಚೀನಾದ ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧಿಸಲು ಕ್ರಮಕೈಗೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದೆ.
ಐಎನ್ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ತನ್ನ ಸದಸ್ಯರ ಪರವಾಗಿ, ಭಾರತೀಯ ಪತ್ರಿಕೆಗಳು ಮತ್ತು ಮಾಧ್ಯಮ ವೆಬ್ಸೈಟ್ಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಚೀನಾ ಸರ್ಕಾರದ ಕ್ರಮವನ್ನು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.
ಭಾರತದಲ್ಲಿ ಎಲ್ಲಾ ರೀತಿಯ ಚೀನಾ ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಭಾರತೀಯ ಮಾಧ್ಯಮ ಕಂಪನಿಗಳಲ್ಲಿ ಚೀನಾ ಮಾಡಿದ ಸಹಯೋಗ, ಹೂಡಿಕೆಗಳನ್ನು ತಕ್ಷಣದಿಂದ ಜಾರಿಗೆ ತರಲು ಗುಪ್ತಾ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಐಎನ್ಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತವಾದ ಚಟುವಟಿಕೆಗಳು, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಚೀನಾದ 59 ಅಪ್ಲಿಕೇಶನ್ಗಳನ್ನು ಭಾರತ ಸೋಮವಾರ ನಿಷೇಧಿಸಿದೆ.