ಕೋಲ್ಕತ್ತಾ, ಜು 02(DaijiworldNews/PY): ಭಾರತಕ್ಕೆ ಶಾಂತಿ ಬೇಕು. ಆದರೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ, ದೇಶವು ಸೂಕ್ತವಾದ ಉತ್ತರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಬಂಗಾಳದಲ್ಲಿ ನಡೆದ ಜನಸಂವಾದ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ನಮ್ಮ ದೇಶವು 20 ಸೈನಿಕರನ್ನು ಕಳೆದುಕೊಂಡಿದೆ. ಚೀನಾದ ಕಡೆಯವರ ಸಂಖ್ಯೆ ದ್ವಿಗುಣವಾಗಿರುತ್ತದೆ ಎಂದರು.
ಈಗ ನೀವು ಕೇವಲ ಎರಡು ಸಿಗಳ ಬಗ್ಗೆ ಕೇಳಬಹುದಾಗಿದೆ. ಮೊದಲನೆಯದು ಕೊರೊನಾವೈರಸ್, ಎರಡನೇಯದು ಚೀನಾ. ನಾವು ಶಾಂತಿಯನ್ನು ನಂಬುತ್ತೇವೆ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಆದರೆ, ಯಾರಾದರೂ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಿದರೆ, ನಾವು ಸೂಕ್ತವಾದ ಉತ್ತರವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ನಾವು ಹೇಗೆ ಪ್ರತೀಕಾರ ತೀರಿಸಿದ್ದೇವೆ ಎಂಬುದನ್ನು ನೀವೆಲ್ಲರೂ ನೆನಪಿನಲ್ಲಿಡಬೇಕು. ನಮ್ಮ ಜವಾನರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದು, ಅದಕ್ಕೆ ಒಂದು ಅರ್ಥವಿದೆ ಎಂದು ಹೇಳಿದ್ದಾರೆ.
ನಾವು ಯಾಕೆ ಆ್ಯಪ್ಗಳನ್ನು ನಿಷೇಧಿಸುತ್ತಿಲ್ಲ ಎಂದು ಈ ಹಿಂದೆ ಆಡಳಿತಾರೂಢ ಟಿಎಂಸಿ ಕೇಳಿದೆ. ಈಗ ನಾವು ಆ್ಯಪ್ಗಳನ್ನು ಏಕೆ ನಿಷೇಧಿಸುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಅವರು ಸರ್ಕಾರದೊಂದಿಗೆ ಬಿಕ್ಕಟ್ಟಿನ ಸಂದರ್ಭ ಏಕೆ ನಿಲ್ಲುತ್ತಿಲ್ಲ ಎಂದು ಕೇಳಿದರು.
ಸಿಪಿಐಎಂ ಚೀನಾವನ್ನು ಏಕೆ ಟೀಕಿಸಲಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. 1962ರಲ್ಲಿ ಇದ್ದ ಅದೇ ಸಿಪಿಐಎಂ ಇಂದಿಗೂ ಇದೆಯಾ ಎಂದು ಕೇಳಿದರು.