ನವದೆಹಲಿ, ಜು 02 (Daijiworld News/MSP): ಸುಮಾರು ಐದು ದಶಕಗಳ ಹಿಂದೆಯೇ ಜಾಗತಿಕ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ "ಫೇರ್" ಎಂಬ ಪದವನ್ನು ಕೈಬಿಡುವುದಾಗಿ ಘೋಷಿಸಿದ್ದ ಸಂಸ್ಥೆ ಇದೀಗ ಫೇರ್ & ಲವ್ಲಿಯಿಂದ 'ಫೇರ್' ಪದವನ್ನು ಗ್ಲೋ' ಪದದೊಂದಿಗೆ ಬದಲಾಯಿಸಲಾಗುವುದು ಎಂದು ಹೇಳಿದೆ.
ಹೀಗಾಗಿ ಇನ್ನು ಮುಂದೆ ಫೇರ್ & ಲವ್ಲಿಯಿಂದ ಗ್ಲೋ & ಲವ್ಲಿಯಾಗಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಹಿಂದೆ ಪುರುಷರ ಶ್ರೇಣಿಯ ಫೇರ್ & ಲವ್ಲಿಯನ್ನು 'ಗ್ಲೋ & ಹ್ಯಾಂಡ್ಸಮ್' ಎಂದು ಕರೆಯಲಾಗುತ್ತದೆ. ಅದೇ ರೀತಿ ಮಹಿಳೆಯರ ಬಳಕೆಯ ಉತ್ಪನ್ನ ಇನ್ನು ಮುಂದೆ ಗ್ಲೋ & ಲವ್ಲಿಯಾಗಿ ಬರಲಿದೆ ಎಂದು ಹೇಳಿಕೊಂಡಿದ್ದು ಈ ಮೂಲಕ "ಸೌಂದರ್ಯದ ಬಗ್ಗೆ ಹೆಚ್ಚು ಅಂತರ್ಗತ ದೃಷ್ಟಿ" ಹೊಂದುವುದಾಗಿ ತಿಳಿಸಿದೆ.
ಫೇರ್ & ಲವ್ಲಿಯಷ್ಟೇ ಅಲ್ಲದೆ, ಇದು ತನ್ನ ಉತ್ಪನ್ನಗಳ ಪ್ಯಾಕ್ಗಳು ಮತ್ತು ಜಾಹೀರಾತಿನಲ್ಲಿ ಫೇರ್/ಫೇರ್ನೆಸ್, ವೈಟ್/ವೈಟನಿಂಗ್, ಲೈಟ್/ ಲೈಟನಿಂಗ್ ಎಂಬಂಥ ಪದಗಳನ್ನು ಕೂಡ ತೆಗೆಯಲಿದೆ.
ಅಮೆರಿಕದಲ್ಲಿ ಭುಗಿಲೆದ್ದ ಜನಾಂಗೀಯ ನಿಂದನೆ ಕಿಚ್ಚು ಫೇರ್& ಲವ್ಲಿ ಹೆಸರು ಬದಲಾವಣೆಗೆ ಕಾರಣವಾಗಿದೆ. ಮೈ ಬಣ್ಣದ ವಿಚಾರಕ್ಕೆ ನಡೆಯುವ ನಿಂದನೆಗೆ ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು. ಇದರಿಂದ ಬ್ರ್ಯಾಂಡ್ ಮೇಲೆ ಪರಿಣಾಮ ಆಗುತ್ತಿದೆ ಎಂದು ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.