ಹುಬ್ಬಳ್ಳಿ, ಜು 02(DaijiworldNews/PY): ಹಿಂದೂಗಳಿಗೆ ದತ್ತಪೀಠ ನೀಡುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಈ ಸಲುವಾಗಿ ರಾಜ್ಯಾದ್ಯಂತ ಜುಲೈ 5ರಂದು ಒಂದು ಕೋಟಿ ಜಪಯಜ್ಞ ಮಾಡಲಾಗುತ್ತಿದೆ ಎಂದು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠ ಹಿಂದೂಗಳಿಗೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರದಿದ್ದರೆ, ಜಿಲ್ಲೆಯ ಶಾಸಕರು, ಸಂಸದರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಡಾ.ಗಿರಿಧರ ಕಜೆ, ಬಾಬಾ ರಾಮದೇವ ಅವರು ಕೊರೊನಾಕ್ಕೆ ಆಯುರ್ವೇದ ಔಷಧವನ್ನು ಅಭಿವೃದ್ದಿಪಡಿಸಿದ ವಿಚಾರ ಸಂತೋಷವಾಗಿದೆ. ಪತಂಜಲಿಯ ಉತ್ಪನ್ನಕ್ಕೆ ತಾಂತ್ರಿಕ ಕಾರಣದ ನೆಪ ತಪ್ಪು. ಈ ವಿಚಾರದ ಹಿಂದೆ ಬಹುರಾಷ್ಟ್ರೀಯ ಕಂಪೆನಿಗಳ ಲಾಬಿ ಕೆಲಸ ನಡೆಸಿದೆ ಎಂದರು.