ಬೆಂಗಳೂರು, ಜು. 03 (DaijiworldNews/MB) : ''ಕೊರೊನಾ ಮಧ್ಯೆಯೂ ನಾವೆಲ್ಲರೂ ಜನರ ನಡುವೆ ಕೆಲಸ ಮಾಡುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಹೊರಗೆ ಬಂದಿಲ್ಲ. ಇಂಥವರಿಂದ ತ್ಯಾಗ, ಬಲಿದಾನ ಸಾಧ್ಯವೇ?'' ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿನ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಕಾಂಗ್ರೆಸ್ ಪಕ್ಷ ಚಳುವಳಿ ಇದ್ದಂತೆ ಡಿಕೆಶಿಯಿಂದ ಪಕ್ಷಕ್ಕೆ ಹೊಸ ಚೈತ್ಯನ ತುಂಬಲಿದೆ. ಈ ಕಾರ್ಯಕ್ರಮವನ್ನು 20 ಲಕ್ಷ ಕಾರ್ಯಕರ್ತರು ವೀಕ್ಷಿಸಿದ್ದು ಈ ಕಾರ್ಯಕ್ರಮದಿಂದ ರಾಜ್ಯಕ್ಕೆ ವಿಶಿಷ್ಟ ಸಂದೇಶ ರವಾನೆಯಾಗಿದೆ'' ಎಂದು ಹೇಳಿದ್ದಾರೆ.