ಚಿಕ್ಕಮಗಳೂರು, ಜು 03(DaijiworldNews/PY): ಬುಧವಾರ ರಾತ್ರಿ ವಿವಿಧ ಸಚಿವರು ಒಟ್ಟಾಗಿ ನಗರದಲ್ಲಿ ಸಭೆ ಸೇರಿದ್ದಾರೆ ಎನ್ನುವ ವರದಿಗೆ ಸ್ಪಷ್ಟನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು, ಸಚಿವರು ಯಾರೂ ಒಟ್ಟಿಗೆ ಸೇರಿಲ್ಲ. ಯಾವುದೇ ರಹಸ್ಯವಾದ ಸಭೆ ನಡೆಸಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಾನು ನಮ್ಮ ಮನೆಯಲ್ಲಿದ್ದೆ. ಸಚಿವರು ಯಾರೂ ಒಟ್ಟಿಗೆ ಸೇರಿಲ್ಲ. ಅಲ್ಲದೇ, ಜಗದೀಶ್ ಶೆಟ್ಟರ್ ಹಾಗೂ ಅಶೋಕ್ ಅವರು ಬೇರೆ ಕಡೆ ಇದ್ದರು. ಇಲ್ಲಿಗೆ ಈಶ್ವರಪ್ಪ ಅವರು ಕೂಡಾ ಬರಲಿಲ್ಲ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ನಾನು ಕೈಗಾರಿಕೆಗಳ ವಿಚಾರವಾಗಿ ಮಾತುಕತೆ ನಡೆಸಲು ಬಂದಿದ್ದೇನೆ. ಅಲ್ಲದೇ, ಸಚಿವರು ಜಿಲ್ಲಾ ಪ್ರವಾಸದಲ್ಲಿ ಇದ್ದೇವೆ. ಇಲ್ಲಿಗೆ ಅಶೋಕ್ ಮಾಮೂಲಿಯಾಗಿ ಬರುವಂತೆ ಆಗಮಿಸಿದ್ಧಾರೆ ಎಂದಿದ್ಧಾರೆ.