ನವದೆಹಲಿ, ಜು. 03 (DaijiworldNews/MB) : ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ಗಳ ದಾಳಿಯಿಂದ 8 ಪೋಲಿಸರು ಹುತಾತ್ಮರಾದ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪೊಲೀಸರ ಹತ್ಯೆ ಉತ್ತರ ಪ್ರದೇಶ ಗೂಂಡಾರಾಜ್ಯ ಎಂಬುವುದಕ್ಕೆ ಮತ್ತೊಂದು ಪುರಾವೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೊಲೀಸರ ಹತ್ಯೆ ಉತ್ತರ ಪ್ರದೇಶ ಗೂಂಡಾರಾಜ್ಯ ಎಂಬುವುದಕ್ಕೆ ಮತ್ತೊಂದು ಪುರಾವೆಯಾಗಿದೆ. ಪೊಲೀಸರು ಸುರಕ್ಷಿತವಾಗಿರದಿದ್ದಾಗ, ಸಾರ್ವಜನಿಕರು ಹೇಗೆ ಇರುತ್ತಾರೆ? ಹತ್ಯೆಗೀಡಾದ ಹುತಾತ್ಮರ ಕುಟುಂಬಕ್ಕೆ ನನ್ನ ಸಂತಾಪ ಹಾಗೂ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.