ನವದೆಹಲಿ, ಜು 03(DaijiworldNews/PY): ನೋಟ್ ಬ್ಯಾನ್, 370 ನೇ ವಿಧಿಯನ್ನು ರದ್ದುಪಡಿಸಿದ್ದು, ಜಮ್ಮು-ಕಾಶ್ಮೀರದ ವಿಭಜನೆ ಭಯೋತ್ಪಾದಕ ಪೀಡಿತ ಕೇಂದ್ರ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಸುಧಾರಿಸಲು ಏನೂ ಮಾಡಿಲ್ಲ ಎಂದು ಶಿವಸೇನೆ ಶುಕ್ರವಾರ ತಿಳಿಸಿದೆ.
ಭಯೋತ್ಪಾದಕ ಚಟುವಟಿಕೆಗಳು, ನಕಲಿ ನೋಟು ಚಲಾವಣೆ ಇನ್ನು ನಿಂತಿಲ್ಲ. ಪ್ರತಿದಿನ ಬೀದಿಗಳಲ್ಲಿ ರಕ್ತ ಹರಿಯುತ್ತಿದೆ. ಮುಗ್ಧ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎಂದು ಸೇನಾ ಮುಖವಾಣಿಯ ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.
ಇತ್ತೀಚೆಗೆ ಸೋಪೂರ್ನಲ್ಲಿ ನಡೆದ ಎನ್ಕೌಂಟರ್ ವಿಷಯವನ್ನು ಉಲ್ಲೇಖಿಸಿದ ಶಿವಸೇನೆ, ತನ್ನ ಅಜ್ಜ ಸತ್ತಿದ್ದಾನೆಂದು ತಿಳಿದಿಲ್ಲದ ಮಗು ಅವನನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದೆ. ಸಿರಿಯಾ, ಈಜಿಪ್ಟ್, ಸೊಮಾಲಿಯಾ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಮಾತ್ರ ಇಂತಹ ಚಿತ್ರಗಳು ತಿಳಿದುಬಂದಿವೆ ಎಂದು ಉಲ್ಲೇಖಿಸಿದೆ.
ಈ ಚಿತ್ರವು ಕೇಂದ್ರ ಸರ್ಕಾರದ ವೈಫಲ್ಯವೆಂದು ಸಾಬೀತುಪಡಿಸುತ್ತದೆ ಎಂಬುದನ್ನು ಈ ಮಂತ್ರಿಗಳು ಅರ್ಥಮಾಡಿಕೊಳ್ಳಬೇಕು. ಕಣಿವೆಯ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದಿದೆ.
ಕಾಶ್ಮೀರ ಮತ್ತು ಲಡಾಖ್ನಲ್ಲಿ ಚೀನಿಯರ ಪ್ರತ್ಯೇಕತಾವಾದಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಂಪಾದಕೀಯ ಒತ್ತಾಯಿಸಿದೆ.