ಬೆಂಗಳೂರು, ಜು 03(DaijiworldNews/PY): ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ಮಾಡಿದರೆ ಯಾವುದೂ ಸಾಧ್ಯ ಎಂಬುದನ್ನು ಈ ಪರೀಕ್ಷೆಗಳು ರುಜುವಾತು ಮಾಡಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರದಂದು ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯಗೊಂಡ ಹಿನ್ನೆಲೆ ಟ್ವೀಟ್ ಮಾಡಿರುವ ಅವರು, ಅಸಾಧ್ಯವನ್ನು ಸಾಧ್ಯವಾಗಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಸುಧಾಕರ್ ಅವರೂ ಟ್ವೀಟ್ ಮಾಡಿದ್ದು, ಇಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕೊರೊನಾ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ಕೊಟ್ಟು ಸುಗಮವಾಗಿ ಪರೀಕ್ಷೆ ಜರುಗಲು ಶ್ರಮಿಸಿದ ಸಿಬ್ಬಂದಿಗೆ, ಮಕ್ಕಳನ್ನು ಹುರಿದುಂಬಿಸಿದ ಪೋಷಕರಿಗೆ, ಧೈರ್ಯವಾಗಿ ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆಗಳು. ಕರ್ನಾಟಕ ಇಂದು ಮತ್ತೊಮ್ಮೆ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.