ಬಳ್ಳಾರಿ, ಜು 03(DaijiworldNews/PY): ಬೆಂಗಳೂರು ನಗರದಲ್ಲಿ ನಾಲ್ಕು ಕಡೆ ವಿದ್ಯುತ್ ಚಿತಾಗಾರ ಹಾಗೂ 10 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಶುಕ್ರವಾರ ಸಂಜೆ ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ, ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ನಡುವೆ ಶವಗಳ ಅಂತ್ಯ ಸಂಸ್ಕಾರದ ಸಂದರ್ಭ ಹಲವೆಡೆ ಗೊಂದಲಗಳು ಕೇಳಿಬರುತ್ತಿವೆ ಎಂದರು.
ಕೊರೊನಾ ಸೋಂಕಿತ ಎ ಹಾಗೂ ಸಣ್ಣ ಪ್ರಮಾಣದ ಮೈಲ್ಡ್ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನು ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಪಡಿಸಿ ಮನೆಯಲ್ಲಿಯೇ ಚಿಕಿತ್ಸೆ ನೀಡುವಂತ ಟಾಸ್ಕ್ ಫೋರ್ಸ್ ಮಾಡುವಂತೆ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ವಿನಾಃ ಕಾರಣ ಸಿದ್ದರಾಮಯ್ಯ ಅವರು ಮಾಸ್ಕ್, ಪಿಪಿಇ ಕಿಟ್ ಖರೀದಿ ಮಾಡುವಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಿದ್ದಾರೆ. ರಾಜ್ಯದಲ್ಲಿ ವ್ಯಾಪಿಸಿರುವ ಕೊರೊನಾ ಸ್ಥಿತಿಯನ್ನು ಪರಶೀಲನೆ ಮಾಡಲು ನಮ್ಮೊಂದಿಗೆ ಬರಲಿ ಎಂದರು.
ಇನ್ನು ಪ್ರಧಾನಿ ಮೋದಿ ಅವರ ವಿರುದ್ದವೂ ಆರೋಪ ನಡೆಸುತ್ತಿರುವ ಸೋನಿಯಾ ಗಾಂಧಿ ಅವರಿಗೆ ತಕ್ಕ ಉತ್ತರ ನೀಡಿದ ಅವರು, ಆಡಳಿತ ಪಕ್ಷದವರು ಎಲ್ಲಿ, ಯಾವಾಗ ತಪ್ಪು ಮಾಡುತ್ತಾರೆ ಎನ್ನುವುದನ್ನು ಕಂಡುಹಿಡಿಯಲು ಟೆಲಿಸ್ಕೋಪ್ ಹಾಕಿ ಗಮನಿಸುತ್ತಿರುತ್ತಾರೆ ಎಂದು ಹೇಳಿದರು.