ಮುಂಬೈ, ಜು 04 (DaijiworldNews/PY): ವ್ಯಕ್ತಿಯೋರ್ವ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ, ಧರಿಸಿ ಸುದ್ದಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎನ್ನುವವರು ಸುಮಾರು 2.89 ಲಕ್ಷ ಮೌಲ್ಯ ಬೆಲೆ ಬಾಳುವ ಚಿನ್ನದ ಮಾಸ್ಕ್ವೊಂದನ್ನು ತಯಾರಿಸಿ, ಧರಿಸಿ ಸುದ್ದಿಯಾಗಿದ್ದು, ಇವರು ಬಂಗಾರದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಸ್ಕ್ನ ಬಗ್ಗೆ ಮಾಹಿತಿ ನೀಡಿರು ಶಂಕರ್, ಈ ಮಾಸ್ಕ್ ಎಷ್ಟು ಪರಿಣಾಮಕಾರಿಯಾಗಿದೆ ಎನ್ನಲು ಸಾಧ್ಯವಿಲ್ಲ. ಈ ಮಾಸ್ಕ್ ತೆಳುವಾಗಿದೆ. ಇದರಲ್ಲಿ ಸಣ್ಣ-ಸಣ್ಣ ರಂಧ್ರಗಳಿರುವ ಕಾರಣ ಉಸಿರಾಡಲು ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಜುಲೈ 1ರವರೆಗೆ ಪಿಂಪ್ರಿ ಚಿಂಚ್ವಾಡ್ 3,284 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 47 ಜನರು ಸಾವನ್ನಪ್ಪಿದ್ದಾರೆ.